
VIDEO – ರಾಷ್ಟ್ರಪತಿಗೆ ಕವದಿ ಗಿಫ್ಟ್ ಕೊಟ್ಟ ಸುಧಾಮೂರ್ತಿ : ಏನಿದರ ವಿಶೇಷ

ಧಾರವಾಡ : ಸೋಮವಾರ ಧಾರವಾಡದಲ್ಲಿ ನಡೆದ ಐಐಐಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇನ್ಫೋಸಿಸ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ, ದೇವದಾಸಿಯರು ಹೊಲೆದ ಉತ್ತರ ಕರ್ನಾಟಕದ ಕವದಿ ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು.
ಧಾರವಾಡ ಐಐಐಟಿ ಉದ್ಘಾಟನೆ ವೇಳೆ ರಾಜ್ಯಪಾಲರಿಗೆ ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಇಳಕಲ್ ಸೀರೆಯೊಂದಿಗೆ ಒಂದು ಪುಸ್ತಕ ನೀಡಿ ಸುಧಾ ಮೂರ್ತಿ ಅವರು ಗೌರವ ಸಲ್ಲಿಸಿದರು.
ಮೂರು ಸಾವಿರ ಹೊಲಿಗೆ ಹಾಕಿದ ರಾಯಚೂರು ಬಳಿ ಇರುವ ದೇವದಾಸಿಯರು ಹೊಲಿದಿದ್ದ ಕೌದಿಯ ಜೊತೆಗೆ, ಒಂದು ಪುಸ್ತಕ ಹಾಗೂ ರೇಷ್ಮೆ ಸೀರೆಯನ್ನು ಕೊಟ್ಟರು. ನಂತರ ಮಾತನಾಡಿದ ಸುಧಾ ಮೂರ್ತಿ ಅವರು, ನಾನು ರಾಷ್ಟ್ರಪತಿ ಮುರ್ಮು ಅವರಿಗೆ ನಾನು ಕವದಿ ಕೊಟ್ಟಿದ್ದೇನೆ, ಆ ಕವದಿ ವಿಷೇಷವಾಗಿದ್ದು, ಅದರ ಜೊತೆಗೆ ಕವದಿ ಬಗ್ಗೆ ಇರೋ ಒಂದು ಪುಸ್ತಕ ಕೊಟ್ಟಿದ್ದೇನೆ, ಆ ಪುಸ್ತಕವನ್ನ ಬರೆದವಳು ನಾನೇ ಎಂದರು.
ಬಂಗಾರ ಬೆಳ್ಳಿ ಎಲ್ಲರೂ ಕೊಡ್ತಾರೆ, ಅವರು ನನಗೆ ಕವದಿ ಕೊಟ್ಟಿದ್ದಾರೆ. ನಾನು ಅವರ ಕಡೆಯಿಂದ ವರ್ಷಕೊಮ್ಮೆಕವದಿ ಹೊಲಿಸುತ್ತೇನೆ, ನಾನು ಗೌರವಾನ್ವಿತರಿಗೆ ಅದನ್ನು ಗಿಫ್ಟ್ ಆಗಿ ಕೊಡುತ್ತೇನೆ. ಅದರ ಹಿಂದೆ ಅವರ ಕಣ್ಣೀರು ಇರುತ್ತೆ. ಹಾಗಾಗಿ ಎಲ್ಲರಿಗೂ ಕವದಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದೇನೆ. ಇನ್ನು ಸಾಮಾನ್ಯ ಜನರು ಏನು ಊಟ ಮಾಡಿದ್ದಾರೆ ಅದನ್ನೆ ರಾಷ್ಟ್ರಪತಿ ಅವರು ತಿಂದಿದ್ದು, ಉತ್ತರ ಕರ್ನಾಟಕದ ಅಡುಗೆಯನ್ನ ಅವರು ಸವಿದಿದ್ದಾರೆ ಎಂದರು.