ವಿರೋಧಿಗಳ ಕನಸಿಗೆ ತಣ್ಣೀರು ಎರಚಿದ ಪ್ರಧಾನಿ ಮೋದಿ ; ಇವತ್ತಿನಿಂದ ಮೋದಿ 3.0
ಬೆಂಗಳೂರು : ಐಎನ್ಡಿಐಎ ( I.N.D.I.A ) ಮೈತ್ರಿಕೂಟದ ಮೂಲಕ ಈ ಬಾರಿ ಪ್ರಧಾನಿ ಮೋದಿ ಅವರನ್ನು ಸೋಲಿಸಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದ ಒಕ್ಕೂಟಕ್ಕೆ ಹಿನ್ನಡೆ ಉಂಟಾಗಿದೆ. ಸ್ಪಷ್ಟ ಬಹುಮತ ಪಡೆದಿರುವ ಎನ್ಡಿಎ ಮೈತ್ರಿಕೂಟ ಅಧಿಕಾರ ನಡೆಸಲಿದೆ.
2014, 2019 ರಲ್ಲಿ ನಿರಂತರ ಎರಡನೇ ಅವಧಿಗೆ ಸರ್ಕಾರ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಅಧಿಕಾರ ನಡೆಸಲಿದೆ. ಇಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಕೆ ಅಧಿಕಾರಕ್ಕೆ ಏರಲಿದ್ದಾರೆ ಎಂಬುದು ಸ್ಪಷ್ಟ.
ಈ ಬಾರಿ ಬಿಜೆಪಿಗೆ ಸ್ವತಂತ್ರವಾಗಿ ಅಧಿಕಾರ ನಡೆಸುವ ಬಲ ಇಲ್ಲದಿದ್ದರು, ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯ ಪರಿಣಾಮ ಸರಳ ಬಹುಮತ ಪಡೆಯುವಲ್ಲಿ ಎನ್ಡಿಎ ಮೈತ್ರಿಕೂಟ ಯಶಸ್ವಿಯಾಗಿದೆ. ಆದರೆ ಪ್ರಧಾನಿ ಕನಸು ಹೊತ್ತುಕೊಂಡು ಸಾಗುತ್ತಿರುವ ರಾಹುಲ್ ಗಾಂಧಿ ಅವರಿಗೆ ಈ ಬಾರಿ ನಿರಾಸೆ ಮುಂದುವರಿದೆ.
ಭಾರತ್ ಜೋಡೋ ಹಾಗೂ ನ್ಯಾಯ ಯಾತ್ರೆಯ ಮೂಲಕ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಈ ಬಾರಿ ಮೋದಿಗೆ ಸೋಲು ನೀಡುವುದು ಪಕ್ಕಾ ಎಂದೇ ಹೇಳುತ್ತಿದ್ದರು. ಆದರೆ ದೇಶದ ಜನ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನೇ ಬೆಂಬಲಿಸುವ ಮೂಲಕ ಕಾಂಗ್ರೆಸ್ ಗೆ ಏಟು ನೀಡಿದೆ.
ಇಂದು ಭಾನುವಾರ ಸಂಜೆ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದು ಪ್ರಮಾನಚನ ತಗೆದುಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುತ್ತಲಿನ ದೇಶಗಳಿಗೆ ಆಹ್ವಾನ ನೀಡಲಾಗಿದ್ದು, ಬಿಗಿ ಭದ್ರತೆಯಲ್ಲಿ ಪ್ರಮಾನವಚನ ಕಾರ್ಯಕ್ರಮ ನಡೆಯಲಿದೆ.