ನಾನು ನರೇಂದ್ರ ದಾಮೋದರದಾಸ್ ಮೋದಿ ; ನೆಹರು ದಾಖಲೆ ಸರಿಗಟ್ಟಿದ ಮೋದಿ
ಬೆಂಗಳೂರು : ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ದಿನವಾಗಿ ಜೂನ್. 9 ದಾಖಲಾಗಿದ್ದು, ಕಾಂಗ್ರೆಸ್ ಹೊರತಾದ ಒಂದು ಪಕ್ಷ ಕೇಂದ್ರದಲ್ಲಿ ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಮೂಲಕ ಇತಿಹಾಸ ನಿರ್ಮಿಸಿದೆ.
2014, 2019 ಹಾಗೂ 2024 ರಿಂದ ಭಾರತದಲ್ಲಿ ಮೂರನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮುಂದುವರಿದಿದೆ. ಭಾನುವಾರ ಸಂಜೆ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇವರ ಜೊತೆ ಹಲವರು ಸಚಿವರಾಗಿ ಪ್ರಮಾಣವಚನ ಪಡೆದರು.
ಈ ಹಿಂದೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ದೇಶದಲ್ಲಿ ಸತತವಾಗಿ ಮೂರನೇ ಬಾರಿಗೆ ಪ್ರಧಾನಿ ಆಗಿದ್ದರು. ಇದಾದ ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಭಾರಿಗೆ ಅಧಿಕಾರಕ್ಕೇರಿದೆ.