ಎಂಇಎಸ್ ಪುಂಡರಿಗೆ ಶಿವಣ್ಣ ಖಡಕ್ ಎಚ್ಚರಿಕೆ
ಬೆಳಗಾವಿ : ಕನ್ನಡ ಬಾವುಟ ಸುಟ್ಟು ಅಪಮಾನ ಮಾಡಿದ್ದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದ ಎಂಇಎಸ್ ಕಿಡಿಗೇಡಿಗಳ ವಿರುದ್ಧ ಖ್ಯಾತ ನಟ ಶಿವರಾಜಕುಮಾರ್ ತಮ್ಮ ಆಕ್ರೋಶ ಹೊರ ಹಾಕುವ ಮೂಲಕ ಮತ್ತೊಮ್ಮೆ ಕನ್ನಡ ಕೆಲಸದಲ್ಲಿ ಮುಂಚೂಣಿ ವಹಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಲಾಗಿತ್ತು. ಈ ಕುರಿತು ಇಡೀ ರಾಜ್ಯಾದ್ಯಂತ ಆಕ್ರೋಶ ಹೊರಹೊಮ್ಮಿತ್ತು. ಇದೇ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟ ಬೆನ್ನಲ್ಲೇ ನಟ ಶಿವಣ್ಣ ಎಂಇಎಸ್ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಬಾವುಟಕ್ಕೆ ಅವಮಾನ ಆದರೆ ಅದು ನಮ್ಮ ತಾಯಿಗೆ ಆದ ಅವಮಾನ. ಇದನ್ನು ಅಖಂಡ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸುತ್ತಾನೆ. ಈ ಕುರಿತಾಗಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಸಮಯ ಬಂದರೆ ಕನ್ನಡಕ್ಕೆ ಹೋರಾಡುವ ಮಾತು ಕೊಟ್ಟಿದ್ದು ಎಂಇಎಸ್ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.