Select Page

Advertisement

Video – ನಾ ಎಲ್ಲಾ ಖಾತೆಯನ್ನೂ ನೋಡಿರುವೆ ; ಸಚಿವ ಸತೀಶ್ ಜಾರಕಿಹೊಳಿಗೆ ಅಥಣಿ ಸಾಹುಕಾರ್ ಟಾಂಗ್

Video – ನಾ ಎಲ್ಲಾ ಖಾತೆಯನ್ನೂ ನೋಡಿರುವೆ ; ಸಚಿವ ಸತೀಶ್ ಜಾರಕಿಹೊಳಿಗೆ ಅಥಣಿ ಸಾಹುಕಾರ್ ಟಾಂಗ್

ಅಥಣಿ : ನನಗೆ ಮತ ಹಾಕಿರುವ ಅಥಣಿ ಜನರಿಗೆ ಹೂ ತರುವೆ ಹೊರತಾಗಿ ಹುಲ್ಲು ತರುವ ಕೆಲಸ ಮಾಡಲಾರೆ. ನನಗೆ ಯಾವುದೇ ಮಂತ್ರಿ ಪದವಿ ಅವಶ್ಯಕತೆ ಇಲ್ಲ. ನಾನು ಎಲ್ಲವನ್ನೂ ನೋಡಿರುವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರೋಧಿಗಳಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಸಂಪುಟದಲ್ಲಿ ಸವದಿಗೆ ಸಚಿವಸ್ಥಾನ ಸಿಗುತ್ತಾ ? ಎಂಬ ಚರ್ಚೆಯ ಮಧ್ಯೆ ಲಕ್ಷ್ಮಣ ಸವದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣೆಯಲ್ಲಿ ಅಥಣಿಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸವದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

ಶನಿವಾರ ಅಥಣಿ ಪಟ್ಟಣದಲ್ಲಿ ಮಾತಮಾಡಿದ ಲಕ್ಷ್ಮಣ ಸವದಿ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಗುರುತಿಸುತ್ತದೆ. ‌ನಾನು ಸಚಿವನಾಗಬೇಕು ಎಂಬ ಆಸೆ ಹೊಂದಿಲ್ಲ. ಉಪಮುಖ್ಯಮಂತ್ರಿ ಹಿಡಿದು ಎಲ್ಲಾ ಖಾತೆಯನ್ನು ನೋಡಿರುವೆ. ನನಗೆ ಸಿಕ್ಕ ಖಾತೆಯನ್ನು ಸಮರ್ಥವಾಗಿ ಮಿಭಾಯಿಸಿರುವೆ. ನಾನು ಯಾವುದನ್ನು ಮಾಡಬಾರದು ಎಂದು ಹೇಳಿದ್ದೇ, ಅದನ್ನೇ ಮಾಡಿ ಈಗ ಕೆಲವರು ಜೈಲಿಗೆ ಹೋಗಿದ್ದಾರೆ ಎಂದರು.

ಲಕ್ಷ್ಮಣ ಸವದಿ ಓಟಕ್ಕೆ ಬ್ರೆಕ್ ಹಾಕುವ ಕೆಲಸ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸವದಿ ಪರೋಕ್ಷವಾಗಿ ಟಾಂಗ್ ನೀಡುವ ಕೆಲಸ ಮಾಡಿದ್ದಾರೆ. ಈಗಾಗಲೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಬಣಗಳು ಸೃಷ್ಟಿಯಾಗಿದ್ದು ಮುಂದೆ ಯಾವ ಮಟ್ಟಕ್ಕೆ ಆರೋಪ ಪ್ರತ್ಯಾರೋಪಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!