Select Page

Advertisement

ಸ್ವ ಪಕ್ಷಕ್ಕೆ ಮುಜುಗರ ತಂದ ಯತ್ನಾಳ್ ; ಬಿಜೆಪಿ ಹೈಕಮಾಂಡ್ ನಾಯಕರನ್ನೇ ವ್ಯಂಗ್ಯ ಮಾಡಿದ ಗೌಡ್ರು

ಸ್ವ ಪಕ್ಷಕ್ಕೆ ಮುಜುಗರ ತಂದ ಯತ್ನಾಳ್ ; ಬಿಜೆಪಿ ಹೈಕಮಾಂಡ್ ನಾಯಕರನ್ನೇ ವ್ಯಂಗ್ಯ ಮಾಡಿದ ಗೌಡ್ರು

ಬೆಂಗಳೂರು : ಸದಾಕಾಲವೂ ತಮ್ಮ ಫೈಯರ್ ಮಾತುಗಳ ಮೂಲಕ ಗಮನಸೆಳೆಯುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಧಾನಸಭೆ ಅಧಿವೇಶನದಲ್ಲಿ ಸ್ವಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡಿದರು.

ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡುವ ಸಂದರ್ಭದಲ್ಲಿ ನಾವು ಕೇವಲ ಹೋರಾಟ ಮಾಡುತ್ತೇವೆ. ಭಾಷಣ ಮಾಡಿ ಹೊರಡಿದರೆ ಮುಗಿಯುತು. ಹೈಕಮಾಂಡ್ ನಾಯಕರ ಒತ್ತಡದಿಂದ ಹೋರಾಟ ಮಾಡಿ ಮತ್ತೆ ಸಿಎಂ ಬಳಿ‌ ಕರೆ ಮಾಡಿ ಕ್ಷಮೆಯಾಚಿಸುವ ಸಂಸ್ಕೃತಿ ಇದೆ ಎಂದು ತಮ್ಮ ಹೋರಾಟವನ್ನೇ ವ್ಯಂಗ್ಯ ಮಾಡಿದರು.

ಭ್ರಷ್ಟಾಚಾರ ಹೋರಾಟದಲ್ಲಿ ವಿರೋಧಪಕ್ಷದ ಸ್ಥಾನದಲ್ಲಿರುವ ನಾವು ಕೇವಲ‌ ಮಾತಿಗಾಗಿ ಆರ್. ಅಶೋಕ್ ನೇತೃತ್ವದಲ್ಲಿ ಹೋರಾಟ ಮಾಡಿದ್ದೇವೆ ಎಂದು ಭಾಷಣ ಮಾಡುತ್ತೇವೆ. ಪೊಲೀಸರು ವಶಕ್ಕೆ ಪಡೆದಾಗ ಟೀ ಕುಡಿದು ಮಾಧ್ಯಮಗಳಲ್ಲಿ ಉಗ್ರ ಹೋರಾಟ ಎಂದು ನಿಂಬಿತವಾಗುತ್ತದೆ.

ಹೋರಾಟದ ನಂತರ ಆಡಳಿತ ಪಕ್ಷದ ನಾಯಕರಿಗೆ ಕರೆ ಮಾಡಿ ಹೈಕಮಾಂಡ್ ಒತ್ತಡದಿಂದ ಪ್ರತಿಭಟನೆ ಮಾಡಿದ್ದೇವೆ ಎಂದು ಕ್ಷಮೆ ಕೋರುತ್ತೇವೆ. ಈ ನಾಟಕದಿಂದ ಹಗರಣ ಮುಚ್ಚಿ ಹೋಗುತ್ತದೆ ಹೊರತಾಗಿ ಇದರಿಂದ ಯಾವುದೇ ಲಾಭವಿಲ್ಲ. ಎಂದು ಸ್ವಪಕ್ಷದ ನಾಯಕರ ವಿರುದ್ಧ ಯತ್ನಾಳ್ ಗುಡುಗಿದರು.

ಈ ಸಂದರ್ಭದಲ್ಲಿ ಯತ್ನಾಳ್ ಮಾತಿಗೆ ಬಿಜೆಪಿ ಶಾಸಕ ಶರಣು ಸಲಗಾರ ಎದ್ದುನಿಂತು. ತಮ್ಮಂತ ಹಿರಿಯರು ಸದನದಲ್ಲಿ ಈ ರೀತಿಯ ಮಾತು ಆಡಬಾರದು ಎಂದು ವಿನಂತಿ ಮಾಡಿಕೊಂಡಾಗ. ಶಾಸಕ ಶರಣು ವಿರುದ್ಧ ಯತ್ನಾಳ್ ಹರಿಹಾಯ್ದಿದ್ದು ಒಂದು ಕ್ಷಣ ಬಿಜೆಪಿ ನಾಯಕರಿಗೆ ಇರುಸು,ಮುರುಸು ತರಿಸಿತ್ತು.

ಒಟ್ಟಿನಲ್ಲಿ ಯತ್ನಾಳ್ ಮಾತಿನಿಂದ ಬಿಜೆಪಿಗೆ ಎಷ್ಟು ಲಾಭ ಆಗಿದೆ ಎಂಬುದಕ್ಕಿಂತ ಕಾಂಗ್ರೆಸ್ ಗೆ ಹೆಚ್ಚಿನ ಲಾಭ ಆಗುತ್ತಿದೆ. ಸ್ವಪಕ್ಷದ ನಾಯಕರ ವಿರುದ್ಧ ಯತ್ನಾಳ್ ಮಾತನಾಡುತ್ತಿರುವುದಕ್ಕೆ ಬಿಜೆಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!