
Belagavi : UPSC ಯಲ್ಲಿ ಮಹತ್ವದ ಹುದ್ದೆ ಪಡೆದ ರಾಯಬಾಗ ಪ್ರತಿಭೆ ಸಮ್ಮೇದ್

ಬೆಳಗಾವಿ : ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಯುವಕ ಸಮ್ಮೇದ್ ಅವರು ಯುಪಿಎಸ್‌ಸಿ ನಡೆಸುವ IFS ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ದೇಶಕ್ಕೆ 60 ನೇ ರ್ಯಾಂಕ್ ಪಡೆದು ತೇರ್ಗಡೆಯಾಗಿದ್ದು ಜಿಲ್ಲೆ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ಮಹಾವೀರ ಪಾಟೀಲ್ ಹಾಗೂ ಸುಜಾತಾ ಪಾಟೀಲ್ ಸುಪುತ್ರ ಸಮ್ಮೇದ್ ಪಾಟೀಲ್, ಯುಪಿಎಸ್‌ಸಿ ನಡೆಸಿದ ಪರೀಕ್ಷೆ ಮತ್ತು ಸಂದರ್ಶನದ ಅಂತಿಮ ಪಟ್ಟಿಯಲ್ಲಿ 60 ನೇ ರ್ಯಾಂಕ್ ನೊಂದಿಗೆ Indian Forest Service ಅಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ.
ಸಮ್ಮೇದ್ ಪಾಟೀಲ್ ಅಪ್ಪಟ ಗ್ರಾಮೀಣ ಪ್ರತಿಭೆ. ಸ್ವಗ್ರಾಮದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ ಪಡೆದು, ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿಯನ್ನು ಪೂರೈಸಿದ್ದರು. ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸತತ ಪ್ರಯತ್ನ ಪಟ್ಟು ಕೊನೆಗೆ ಯಶಸ್ಸು ಕಂಡಿದ್ದಾರೆ. ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.