
Video – ಟಿಪ್ಪು ಸುಲ್ತಾನ್ ಕಾರ್ಯಕ್ರಮಕ್ಕೆ ವೈಯಕ್ತಿಕ 50 ಸಾವಿರ ದೇಣಿಗೆ : ಲಕ್ಷ್ಮಣ ಸವದಿ ಪುತ್ರನ ಹೇಳಿಕೆ

ಅಥಣಿ : ಟಿಪ್ಪು ಸುಲ್ತಾನ್ ಜಯಂತಿ ಕೇವಲ ಒಂದು ವರ್ಷಕ್ಕೆ ಸೀಮಿತ ಆಗಬಾರದು. ಮುಂದಿನ ವರ್ಷ ಅದ್ಧೂರಿ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ನಾನು 50 ಸಾವಿದ ದೇಣಿಗೆ ನೀಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹೇಳಿಕೆ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಜರುಗಿದ ಟಿಪ್ಪು ಸುತ್ತಾನ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಟಿಪ್ಪು ದೇಶದ್ರೋಹಿ ಎಂದು ಹೇಳುವವರು ಅವರ ಮನೆಯಲ್ಲಿನ ಬಿರಿಯಾನಿ ಬೇಕು ಎನ್ನುತ್ತಾರೆ. ಮುಂದಿನ ವರ್ಷ ಅದ್ಧೂರಿ ಕಾರ್ಯಕ್ರಮಕ್ಕೆ 50 ಸಾವಿರ ದೇಣಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಅಧಿಕೃತವಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಮಾಡಲು ರಾಜ್ಯ ಸರ್ಕಾರ ನಿರಾಕರಣೆ ಮಾಡಿದೆ. ಅದಾಗ್ಯೂ ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಮಾಡಲು ಶಾಸಕರ ಪುತ್ರ ವೈಯಕ್ತಿಕ ದೇಣಿಗೆ ನೀಡುವ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.