Select Page

Advertisement

ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶ ಇಂದಿನ ಸಮಾಜಕ್ಕೆ ಅವಶ್ಯ – ಎಂ.ಜಿ ಹಿರೇಮಠ

ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶ ಇಂದಿನ ಸಮಾಜಕ್ಕೆ ಅವಶ್ಯ – ಎಂ.ಜಿ ಹಿರೇಮಠ

ಬೆಳಗಾವಿ : ಸಮಾಜಕ್ಕೆ ಶಾಂತಿ ಸಿಗಬೇಕು ಎಂದು ರೇಣುಕಾಚಾರ್ಯರರು ಮಾನವ ಕುಲಕ್ಕೆ ಜಯವಾಗಲಿ ಎಂದು ಪ್ರತಿಪಾದನೆ ಮಾಡಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಹೇಳಿದರು.

ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ಸರಕಾರ, ಜಿಲ್ಲಾ ಆಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಶ್ತೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವೇಶ್ವರರ ತತ್ವಾದರ್ಶಗಳನ್ನು ನಮ್ಮ ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ರೇಣುಕಾಚಾರ್ಯರು ಸೀಮಿತವಾಗಿಲ್ಲ. ಎಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸಿದರು ಎಂದರು.

ಭಾರತ ದೇಶ ಶಾಂತಿಯನ್ನು ಬಯಸುತ್ತದೆ. ಅದು ರೇಣುಕಾಚಾರ್ಯರ ವಿಚಾರವೂ ಅದೇ ಆಗಿತ್ತು.‌ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಪರಸ್ಪರ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಕರೆ ನೀಡಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಪ್ರತಿ ವರ್ಷ ಮಾ. ೫ ರಂದು ಸರಕಾರ ಆಚರಣೆ ಮಾಡಲು ಸೂಚನೆ ನೀಡಿದೆ. ಅದರಂತೆ ರೇಣುಕಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ಚಂದ್ರಶೇಖರ ಸಾಲಿ ಸವಡಿಮಠ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ರೇಣುಕಾಚಾರ್ಯರನ್ನು ಪರಿಚಯ ಮಾಡಿಸಿಕೊಟ್ಟವರು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಹುಕ್ಕೇರಿ ಹಿರೇಮಠ ಯಾವುದೇ ಜಾತಿ, ಬೇಧ ಭಾವ ಮಾಡದೆ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಹೊರಟ್ಟಿದ್ದಾರೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಬೋಧಿಸಿದರು. ರೇಣುಕಾಚಾರ್ಯ ಅಗಸ್ತ್ಯ ಮಹರ್ಷಿಗೆ ಬೋಧಿಸಿದ ಮಹಾನ್ ಗ್ರಂಥವನ್ನು ಕಾರಂಜಿಮಠದ ಶ್ರೀಗಳು ಮುದ್ರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ ಅವರನ್ನು ಕೇವಲ ಜಂಗಮ ಸಮಾಜಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಲ್ಲ ಸಮಾಜದವರು ಆರಾಧಿಸುವ ಜಗದ್ಗುರು ರೇಣುಕಾಚಾರ್ಯರು ಎಂದರು.

ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಎಲ್ಲ ಕಡೆ ಆಚರಣೆ ಮಾಡಿ ಆರಾಧಿಸಿದ್ದೇವೆ. ರೇಣುಕಾಚಾರ್ಯರು ರೇವಣ ಸಿದ್ಧರಾಗಿ ಅವಾತರ ತಾಳಿದವರು. ನಮಗೆ ಜಾತಿ, ಪಂಥ, ಬೇಧ ಭಾವ ಇರಬಾರದು ಎಲ್ಲರನ್ನು ಪ್ರೀತಿಸುವ ಕೆಲಸ ಮಾಡಿ, ರೇಣುಕಾಚಾರ್ಯರು ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಎಲ್ಲ ಕಡೆ ಎಲ್ಲ ಮಹಾತ್ಮರ ದಿನಾಚಾರಣೆಯನ್ನು ಮಾಡುತ್ತಾರೆಯೋ ಅದೇ ರೀತಿ ಎಲ್ಲ ಶಾಲಾ, ಕಾಲೇಜುಗಳಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡುವ ಅದೇಶವನ್ನು ಸರಕಾರ ಮಾಡಬೇಕೆಂದು ಆದೇಶ ಹೊರಡಿಸಬೇಕೆಂದು ಆಶಯ ವ್ಯಕ್ತಪಡಿಸಿದ್ದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನಿದ್ಯ ವಹಿಸಿದರು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವೀರುಪಾಕ್ಷಯ್ಯ ನೀರಲಗಿಮಠ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ, ಮುಕ್ತಾರ ಹುಸೇನ್ ಪಠಾಣ, ಮಹಾಂತ ಒಕ್ಕೂಂದ, ಮಹಾಂತೇಶ ರಣಗಟ್ಟಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಗುರುಕುಲದ ವಿದ್ಯಾರ್ಥಿಗಳು ರೇಣುಕಾಚಾರ್ಯರ ಗೀತೆ ಹಾಡಿದ ಬಳಿಕ ಸಿದ್ಧಾಂತ ಶಿಖಾಮಣಿ ಪಠಣ ಮಾಡಿದರು.

ವಿಜೃಂಭಣೆ ಮೆರವಣಿಗೆ

ಇದೇ ಮೊದಲ ಬಾರಿಗೆ ಸಿದ್ಧಾಂತ ಶಿಖಾಮಣಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಸರಕಾರ ಆಚರಣೆ ಮಾಡುತ್ತಿದ್ದು, ರೇಣುಕಾಚಾರ್ಯರ ಭವ್ಯ ಮೆರವಣಿಗೆಗೆ ಗುರುವಾರ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು.

ಅಶೋಕ ವೃತ್ತದಿಂದ ಆರಂಭವಾದ ಜಗದ್ಗುರು ಶ್ರೀ ರೇಣುಕಾಚಾರ್ಯರ ಭವ್ಯ ಮೆರವಣಿಗೆ ಕಿಲ್ಲಾ ಕೋಟೆ, ಅಶೋಕ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸಮಾಪ್ತಿಯಾಯಿತು.

ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವೀರುಪಾಕ್ಷಯ್ಯ ನೀರಲಗಿಮಠ, ಮುಕ್ತಾರ ಹುಸೇನ ಪಠಾಣ, ಗಣೇಶ ಮಠಪತಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *