
ಅಥಣಿ : ನೀರು ಬಂತು ಹೊರಗೆ ಬನ್ನಿ ಅಂದ್ರು ಮನೆ ಬಿಟ್ಟು ಬರದ ಜನ ; ಹೈರಾಣಾದ ಅಧಿಕಾರಿಗಳು

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಹಿನ್ನೆಲೆ
ಕೃಷ್ಣಾ ನದಿಗೆಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಮುಳುಗಡೆ ಭೀತಿಯಲ್ಲಿದೆ.
ಅಥಣಿಯ ಹುಲಗಬಾಳ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ 40ಕ್ಕೂ ಹೆಚ್ಚು ಕುಟುಂಬಗಳಿಗೆ ಹೊರಗೆ ಬಾ ಎಂದು ಅಧಿಕಾರಿಗಳು ಕರೆದರು ಜನ ಖ್ಯಾರೆ ಎನ್ನುತ್ತಿಲ್ಲ. ಮಾಂಗ್ ವಸತಿ ತೋಟದ ಜನ ಸಂಪರ್ಕ ರಸ್ತೆ ಕಳೆದುಕೊಂಡರು ಸುರಕ್ಷಿತ ಸ್ಥಳಕ್ಕೆ ಬರುತ್ತಿಲ್ಲ.
ಮಕ್ಕಳು, ವಯೋವೃದ್ದರೂ ಜೊತೆಯಾಗಿ ದನಕರುಗಳು ಕೂಡ ನಡುಗಡ್ಡೆಯಲ್ಲಿ ಸಿಲುಕಿದ್ದು. ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆ ತಗೆಕೊಂಡಿದ್ದಾರೆ.
ತಾಲೂಕ ಆಡಳಿತದಿಂದ ಅಲ್ಲಿನ ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಜರುಗಿದೆ. ಆದರೆ ಅನೇಕ ಕುಟುಂಬಗಳು ತಾಲೂಕ ಆಡಳಿತ ಮತ್ತು ಸರ್ಕಾರ ನಮಗೆ ಶಾಶ್ವತ ನೆಲೆ ಕಲ್ಪಿಸಬೇಕು. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ತಾಲೂಕ ಅಧಿಕಾರಿಗಳು ಅವರನ್ನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈಗ ಹುಲುಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, ಗ್ರಾಮಸ್ಥರು ತಮ್ಮ ಜಾನುವಾರಗಳ ಸಮೇತ ಅಲ್ಲಿ ಸ್ಥಳಾಂತರಗೊಳ್ಳಬೇಕೆಂದು ಜನರ ಮನವೊಲಿಸುವ ಕೆಲಸ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಾಣಿ. ಯು, ತಾಲೂಕ ಪಂಚಾಯತ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಶ್ರೀಪಾದ್ ಜಲ್ದಿ, ಸಿಪಿಐ ರವೀಂದ್ರ ನಾಯ್ಕೋಡಿ, ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ ಸೇರಿದಂತೆ ಗ್ರಾಮ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.