
ಮೂಢನಂಬಿಕೆ ಒಳಗಾಗಿ ಸ್ವಂತ ಮಕ್ಕಳನ್ನೆ ಕೊಂದಿದ್ದ ಕಿರಾತಕನಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ಮೂಢನಂಬಿಕೆ ಒಳಗಾಗಿ ಸ್ವಂತ ಇಬ್ಬರು ಮಕ್ಕಳನ್ನು ಕೊಂದು ಜೈಲು ಪಾಲಾಗಿದ್ದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಳಗಾವಿ ನಗರದ ಕಂಗ್ರಾಳಿ ಕೆ.ಹೆಚ್ ಗ್ರಾಮದ ನಿವಾಸಿ ಅನೀಲ್ ಬಾಂದೇಕರ್ ಎಂಬಾತ ತನ್ನ ಮನೆ ಮಾರಾಟ ಮಾಡಲು ಯತ್ನಿಸಿದರು ಯಾರೂ ಖರೀದಿ ಮಾಡಿರಲಿಲ್ಲ. ಒಂದು ದಿನ ರಾತ್ರಿ ಕನಸಿನಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆ ರಕ್ತವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಿದರೆ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಭ್ರಮೆ ಮೂಡಿತ್ತಂತೆ.
ಮೂಢನಂಬಿಕೆಯನ್ನೇ ನಂಬಿದ ವ್ಯಕ್ತಿ ತನ್ನ ಮಕ್ಕಳಾದ ಅಂಜಲಿ (8), ಅನನ್ಯ ( 4 ) ಇಬ್ಬರಿಗೆ ಪಿನಾಯಿಲ್ ಕುಡಿಸಿ ನಂತರ ಅವರ ಮೃತದೇಹದಿಂದ ರಕ್ತ ತಗೆದುಕೊಂಡು ಮನೆಯ ಶಿವಲಿಂಗಕ್ಕೆ ಹಾಕಿದ್ದ. ಈ ಕುರಿತು ಅಂದಿನ ಎ ಪಿ ಎಮ್ ಸಿ ಸಿಪಿಐ ಮಂಜುನಾಥ ಹಿರೇಮಠ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದದ್ದರು.

ಈ ಪ್ರಕರಣದಲ್ಲಿ ನಸ್ರೀನ ಬಂಕಾಪುರೆ ಸಾರ್ವಜನಿಕ ಅಭಿಯೋಜಕರಾಗಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪೊಲೀಸ್ ತನಿಖೆ ಸಾಕ್ಷಾಧಾರಗಳನ್ನು ಹಾಗೂ ವಾದವನ್ನು ಆಲಿಸಿದ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ದಂಡವನ್ನು ವಿಧಿಸಿ ಶಿಕ್ಷೆ ನೀಡಿದೆ.
ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಪಿಐ ಶ್ರೀ. ಮಂಜುನಾಥ ಹಿರೇಮಠ ಹಾಗೂ ತನಿಕಾ ಸಹಾಯಕ ವೀರಭದ್ರ ಬೂದನವರ ರವರ ಕಾರ್ಯವನ್ನು ಪೊಲೀಸ್ ಆಯುಕ್ತರ ಯಡಾ ಮಾರ್ಟಿನ ಮಾರ್ಬನ್ಯಾಂಗ ಹಾಗೂ ಡಿಸಿಪಿಗಳು ಪ್ರಶಂಸಿಸಿದ್ದಾರೆ.