
ಇದು ರಸ್ತೆಯೋ….ಇಲ್ಲ ನದಿಯೋ…..ಗೋವಾ ರಸ್ತೆಯಲ್ಲಿ ಸೃಷ್ಟಿಯಾದ ಅವಾಂತರ ಅಷ್ಟಿಷ್ಟಲ್ಲ….!

ಬೆಳಗಾವಿ : ಖಾನಾಪುರ – ರಾಮನಗರ ಮಾರ್ಗವಾಗಿ ಅನಮೋಡಕ್ಕೆ ತೆರಳುವ ರಸ್ತೆ ಸುಸ್ಥಿತಿ ಕಂಡರೆ ಶಾಕ್ ಆಗುವುದು ಗ್ಯಾರಂಟಿ. ವರ್ಷಗಳೇ ಕಳೆದರೂ ಈ ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಆಮೆ ಗತಿಯಲ್ಲೇ ಸಾಗಿದೆ.
ಹೌದು ಗೋವಾದಿಂದ ಅನಮೋಡ ಮಾರ್ಗವಾಗಿ ಖಾನಾಪುರಕ್ಕೆ ಬರುವ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ಕಾಮಗಾರಿ ಕುರಿತು ಜನ ಅನೇಕ ಬಾರಿ ಸರ್ಕಾರಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನ ಆಗಿಲ್ಲ. ಸಧ್ಯ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ.