
ಮೊದಲಬಾರಿ ಮತದಾನದ ಸಂತಸ

ನೀವು – ಮೊದಲಬಾರಿಗೆ ಮತ ಚಲಾಯಿಸಿದ್ದರೆ ನಿಮ್ಮ ಮತ ಚಲಾಯಿಸಿದ ಪೋಟೋ ಹಾಗೆ ಹೆಸರು ಮತ್ತು ವಿಳಾಸವನ್ನು ನಮ್ಮ ಬೆಳಗಾವಿ ವಾಯ್ಸ್ ಸಂಖ್ಯೆ – 6361885811 ವಾಟ್ಸಪ್ ಮಾಡಿ.
ಬೆಳಗಾವಿ : ಮೊದಲಬಾರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಬಳಸಿದ ಸಂತೋಷದಲ್ಲಿ ಯುವ ಮತದಾರರು ಇದ್ದಾರೆ.
ಬೆಳಗಾವಿ ರಾಮತೀರ್ಥ ನಗರ ನಿವಾಸಿ ಅಮೃತಾ ಶಿವಾನಂದ ಹಂದರಾಳ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ನಿವಾಸಿ ರಮಾ ದೇಶಪಾಂಡೆ ಮೊದಲಬಾರಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಮತದಾನ ಪ್ರಕ್ರಿಯೆ ಮುಂದುವರಿದಿದ್ದು ಮಧ್ಯಾಹ್ನ 1 ಗಂಟೆವರೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 40.78 ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 45.69 ಶೇಕಡಾ ಮತದಾನವಾಗಿದೆ.