
ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಕಾಂಗ್ರೆಸ್ ಪ್ರಜಾಧ್ವನಿ ಬಸ್

ಬೆಳಗಾವಿ : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ರಾಜ್ಯಾಧ್ಯಂತ ಸಂಚರಿಸಲು ಪ್ರಜಾಧ್ವನಿ ಯಾತ್ರೆ ಪ್ರಾರಂಭಿಸಿದೆ. ಆದರೆ ಪ್ರಜಾಧ್ವನಿ ಬಸ್ ಮಾತ್ರ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ.
ಹೋದಲೆಲ್ಲ ಪ್ರಜಾಧ್ವನಿ ಬಸ್ ಕೆಟ್ಟು ನಿಂತ ಪರಿಣಾಮ ನಾಯಕರು ಭೇರೆ ಹಾದಿ ಇಲ್ಲದೆ ತಮ್ಮ ಕಾರುಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ನಿರ್ಮಾನವಾಗಿದೆ. ಸಾಮಾನ್ಯವಾಗಿ ರೋಡ್ ಶೋ ಸಂದರ್ಭದಲ್ಲಿ ನಿಧಾನವಾಗಿ ಬಸ್ ಓಡಿಸಬೇಕಾದ ಪರಿಸ್ಥಿತಿ ಇರುವುದರಿಂದ ಆಗಾಗ್ಗೆ ಏನಾದರು ಒಂದು ಸಮಸ್ಯೆ ಉದ್ಭವವಾಗುತ್ತಿದೆ.
ಒಮ್ಮೆ ಕ್ಲಚ್ ಹಾಳಾದರೆ, ಮತ್ತೊಮ್ಮೆ ಇನ್ನೊಂದು ಅವಘಡ ಸಂಭವಿಸುತ್ತಿರುವ ಹಿನ್ನಲೆ ಟ್ರ್ಯಾಕ್ಟರ್ ಸೇರಿದಂತೆ ಬೇರೆ ವಾಹನಗಳ ಸಹಾಯದಿಂದ ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರಿಗೆ ತೊಂದರೆ ನೀಡುತ್ತಿರುವುದು ಸುಳ್ಳಲ್ಲ.