Video : ಕನ್ನಡಿಗರ ಮೇಲೆ ಹಲ್ಲೆಮಾಡಿ ಪುಂಡಾಟ ಮೆರೆದ ಎಂಇಎಸ್
ಬೆಳಗಾವಿ : ಎಂಇಎಸ್ ಪುಂಡರ ಅಟ್ಟಹಾಸ ಬೆಳಗಾವಿ ಜಿಲ್ಲೆಯಲ್ಲಿ ಮಿತಿ ಮೀರಿದೆ. ಗುರುವಾರ ತಡರಾತ್ರಿ ಧಾಮನೆಯಲ್ಲಿ ಮದುವೆ ಮುಗಿಸಿಕೊಂಡು ಕನ್ನಡ ಹಾಡು ಹಚ್ಚಿ ಮೆರವಣಿಗೆ ಮಾಡುವ ವೇಳೆ ಎಂಇಎಸ್ ಪುಂಡರು ಆಕ್ಷೇಪ ವ್ಯಕ್ತಪಡಿಸಿ, ಹಲ್ಲೆ ಮಾಡಿದ್ದಾರೆ.
ಗುರುವಾರ ಅದ್ದೂರಿಯಾಗಿ ಮದುವೆ ಮಾಡಿ ರಾತ್ರಿ ಬ್ಯಾಂಡ್ ಸಮೇತ ವಧು-ವರನ್ನು ಕುಟುಂಬದವರು ಮೆರವಣಿಯಲ್ಲಿ ಕನ್ನಡ ಹಾಡು ಹಾಕಿ ಕನ್ನಡ ಧ್ವಜ ಹಿಡಿದು ಕುಣಿಯುತ್ತಿದ್ದ ವೇಳೆ ಎಂಇಎಸ್ ಪುಂಡರು ವಧು-ವರ ಸೇರಿದಂತೆ ಮೆರವಣಿಗೆಯಲ್ಲಿದ್ದವರ ಹಲ್ಲೆ ಮಾಡಿದ್ದಾರೆ ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡವರು ಆರೋಪಿಸಿದ್ದಾರೆ.
ಮೆರವಣಿಗೆಯಲ್ಲಿದ್ದ ಐವರ ಮೇಲೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಂಇಎಸ್ ಪುಂಡರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಹಲ್ಲೆ ಮಾಡಿರುವ ಎಂಇಎಸ್ ಪುಂಡರನ್ನು ಬೆಳಗಾವಿಯಿಂದ ಗಡಿಪಾರು ಮಾಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮದುವೆ ಮೆರವಣಿಗೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನರನ್ನು ಗ್ರಾಮೀಣ ಪೊಲೀಸ್ ರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.