ನಗರ ಪೊಲೀಸರ ವೈಫಲ್ಯ ಸರ್ಕಾರಕ್ಕೆ ತಲೆನೋವು : ಖಡಕ್ ಅಧಿಕಾರಿ ಸೀಮಾ ಲಾಟ್ಕರ್ ಬೆಳಗಾವಿ ಬರುವ ಸಾಧ್ಯತೆ ?
ಬೆಳಗಾವಿ : ಕಳೆದ ಹದಿನೈದು ದಿನಗಳಿಂದ ಕುಂದಾನಗರಿಯನ್ನು ಕಂಗೆಡಿಸಿದ ಗಡಿ ವಿವಾದ ಒಂದು ಕಡೆಯಾದರೆ ಮತ್ತೊಂದು ಕಡೆ ಭಾಷಾ ಸಾಮರಸ್ಯ ಕೆಡಿಸುವ ಚಟುವಟಿಕೆಗಳು. ಇದರ ಮಧ್ಯೆ ಪದೇ ಪದೇ ವಿಫಲರಾಗುತ್ತಿರುವ ನಗರ ಪೊಲೀಸರ ಕಾರ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಸದ್ಯಕ್ಕೆ ಗಡಿ ವಿವಾದದ ಕಾವು ಜೋರಾಗಿದ್ದು ಇದೇ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕೂಡಾ ನಡೆಯುತ್ತದೆ. ಈ ಸಂದರ್ಭದಲ್ಲಿ ಎಂಇಎಸ್ ನವರ ಪುಂಡಾಟ ಒಂದು ಕಡೆಯಾದರೆ ಪ್ರತಿಭಟನೆಗಳ ಕಾವು ಅಷ್ಟೇ ಪ್ರಮಾಣದಲ್ಲಿ ಇರುತ್ತವೆ. ಇದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಮುಖ್ಯವಾಗುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಸರ್ಕಾರ ಖಡಕ್ ಅಧಿಕಾರಿ ನೇಮಕಕ್ಕೆ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಡಾ. ಬೋರಲಿಂಗಯ್ಯ ಅವರಿಗೆ ಸಿಗದ ಉತ್ತಮ ತಂಡ – ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರಿಗೆ ಕೆಳ ಹಂತದಲ್ಲಿ ದಕ್ಷ ಅಧಿಕಾರಿಗಳು ಸಿಗುತ್ತಿಲ್ಲ. ಇದರಿಂದ ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾಗುತ್ತಿದೆ. ಮತ್ತು ಡಿಸಿಪಿ ರವೀಂದ್ರ ಗಡಾದಿ ಅವರ ತಪ್ಪು ನಿರ್ಧಾರಗಳು ಕೆಲವು ಸಂದರ್ಭಗಳಲ್ಲಿ ಆಯುಕ್ತರಿಗೆ ಇರುಸು ಮುರುಸು ಉಂಟುಮಾಡಿದೆ. ಇವರ ಉತ್ತಮ ಕಾರ್ಯವೈಖರಿಗೆ ಜನ ಸಂತುಷ್ಟರಾಗಿದ್ದರು ಕೆಳ ಹಂತದ ಅಧಿಕಾರಿಗಳ ಮೇಲೆ ಅಸಮಾಧಾನ ಇದ್ದೇ ಇದೆ.
ಸಿಮಾ ಲಾಟ್ಕರ್ ಗೆ ಮನೆ ಹಾಕುವುದಾ ಸರ್ಕಾರ : ಇನ್ನೂ ಮುಂದಿನ ಮೂರು ತಿಂಗಳಲ್ಲಿ ಸರ್ಕಾರ ಚುನಾವಣೆ ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನವನ್ನ ಅಚ್ಚುಕಟ್ಟಾಗಿ ಮಾಡಬೇಕಾದ ಒತ್ತಡ ಸರ್ಕಾರದ ಮೇಲೆ ಇದೆ. ಆದರೆ ಅಧಿಕಾರಿಗಳ ಕಾರ್ಯವೈಖರಿಗೆ ಹಲವು ಹಿರಿಯ ಸಚಿವರ ಅಸಮಾಧಾನ ಇದ್ದೇ ಇದೆ. ಈ ಹಿನ್ನಲೆಯಲ್ಲಿ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಹಿಂದಿನ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಅವರನ್ನು ಮರು ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ನಗರದಲ್ಲಿ ನಡೆಯುವ ಕೆಲವು ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸಿ ಕೆಲಸ ಮಾಡುತ್ತಿದ್ದ ಇವರು ಖಡಕ್ ಅಧಿಕಾರಿ ಎಂದೇ ಖ್ಯಾತಿ ಹೊಂದಿದ್ದರು. ಅಷ್ಟೇ ಅಲ್ಲದೆ ಬೆಳಗಾವಿ ನಗದಲ್ಲಿ ನಡೆಯುವ ಅಧಿವೇಶನ, ಭಾಷಾವಾರು ಪ್ರತಿಭಟನೆಗಳು ಸೇರಿಂದತೆ ಹಲವು ಸಂದರ್ಭಗಳಲ್ಲಿ ಅತ್ಯಂತ ಸಮರ್ಪಕವಾಗಿ ಕೆಲಸ ನಿರ್ವಹಿಸಿದ ಹಿನ್ನಲೆಯಲ್ಲಿ ಇವರ ಮೇಲೆ ಸರ್ಕಾರಕ್ಕೂ ನಂಬಿಕೆ ಇದೆ. ಈ ಕಾರಣಕ್ಕಾಗಿ ಮತ್ತೊಮ್ಮೆ ಸೀಮಾ ಲಾಟ್ಕರ್ ಅವರ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಡಿಸಿಪಿ ಗಡಾದಿ ಅವಾಂತರದಿಂದ ಸರ್ಕಾರಕ್ಕೆ ಮುಜುಗರ : ಬೆಳಗಾವಿ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರ ಕೆಲವು ನಿರ್ಧಾರ ಮತ್ತು ಅವಾಂತರಗಳಿಂದ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಭಾಷಾ ವಿಷಯದಲ್ಲಿ ಸೂಕ್ಷ್ಮತೆ ಅರಿತು ಕೆಲಸಮಾಡುವ ರೀತಿ ಈವರೆಗೂ ಅವರಲ್ಲಿ ಕಂಡುಬಂದಿರುವುದು ವಿಪರ್ಯಾಸ. ಈ ಎಲ್ಲಾ ಕಾರಣಗಳಿಂದ ನಗರದ ಕೆಲವು ಹಿರಿಯ ಅಧಿಕಾರಿಗಳ ತಲೆದಂಡ ನಿಶ್ಚಿತ ಹೇಳಲಾಗಿತ್ತಿದೆ.
ಪೊಲೀಸ ಇಲಾಖೆಯಲ್ಲಿಯಲ್ಲಿ ಉತ್ತಮ ಹೆಸರು ಪಡೆದುಕೊಂಡ ಅಧಿಕಾರಿಗಳ ಪೈಕಿ ನಗರ ಪೊಲೀಸ ಕಮಿಷ್ನರ್ ಡಾ. ಬೋರಲಿಂಗಯ್ಯ ಅವರು ಒಬ್ಬರು, ಬೆಳಗಾವಿ ನಗರಕ್ಕೆ ಖಡಕ್ ಕಮಿಷನರ್ ಅವಶ್ಯಕತೆ ಹಿನ್ನೆಲೆಯಲ್ಲಿ ಇವರನ್ನು ಸರ್ಕಾರ ನೇಮಕ ಮಾಡಿತ್ತು. ಇವರ ನೇಮಕದಿಂದಾಗಿ ಬೆಳಗಾವಿ ಜನತೆ ಅತ್ಯಂತ ಭರವಸೆ ಇಟ್ಟುಕೊಂಡಿದ್ದರು. ಆದರೆ ಸರ್ಕಾರ ಹಾಗೂ ಬೆಳಗಾವಿ ಜನತೆ ಇಟ್ಟ ಭರವಸೆ ಉಳಿಸಿಕೊಳ್ಳುವಲ್ಲಿ ನಗರ ಪೊಲೀಸರು ವೈಫಲ್ಯವಾಗಿದೆ ಎಂಬುದು ನಗರ ಜನತೆಯಲ್ಲಿ ಚರ್ಚೆಯಾಗುತ್ತಿದೆ.
ಅಲ್ಲದೇ ಖಡಕ ಅಧಿಕಾರಿಯಾಗಿರುವ ‘ಬೋರ ‘ಲಿಂಗಯ್ಯ ಅವರ ಮೃದು ಧೋರಣೆಯಿಂದ ನಗರ ಪೊಲೀಸ ವ್ಯವಸ್ಥೆಯಲ್ಲಿ ಕುಸಿತ ಕಾಣುತ್ತಿದೆ.
ಬೆಳಗಾವಿಗೆ ಬೇಕಿದೆ ಹೊರ ಜಿಲ್ಲೆ ಅಥವಾ ಹೊರ ರಾಜ್ಯದ ಮೂಲದ ಖಡಕ್ ಅಧಿಕಾರಿಗಳು. ರಾಜಕೀಯ ಕೃಪಾಕಟಾಕ್ಷದಿಂದ ಹಲವು ವರ್ಷಗಳಿಂದ ಬೆಳಗಾವಿಯಲ್ಲಿಯೇ ಬೇರೂರಿರುವ ಅಧಿಕಾರಿಗಳಲ್ಲಿ ಪೋಲಿಸಿಂಗ್ ಇಲ್ಲದಂತಾಗಿದೆ. ರಾಜಕೀಯ ನಾಯಕರು ಹೇಳಿದಂತೆ ಜೀ ಹುಜೂರು ಎನ್ನುತ್ತಿರುವುದೇ ಬೆಳಗಾವಿ ಪೊಲೀಸ ವ್ಯವಸ್ಥೆಗೆ ಕುಂದುಂಟು ಮಾಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ