ಪ್ರಭಾವಿ ರಾಜಕಾರಣಿಗಳ ಹೆಸರಲ್ಲಿ ಗೋಲ್ ಮಾಲ್ – ಬೆಳಗಾವಿ ರಾಜಕಾರಣಿಗಳೆ ಎಚ್ಚರ… ಎಚ್ಚರ…!
ಬೆಳಗಾವಿ : ಪ್ರಭಾವಿ ರಾಜಕಾರಣಿಗಳ ಹೆಸರು ಹೇಳಿಕೊಂಡು ಅಧಿಕಾರಿಗಳ ಬಳಿ ವೈಯಕ್ತಿಕ ಕೆಲಸ ಮಾಡಿಕೊಳ್ಳುವ ಜಾಲ ಎಲ್ಲೆಡೆ ಬೇರೂರಿದ್ದು, ಸಧ್ಯ ಬೆಳಗಾವಿಯಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಪ್ರಭಾವಿ ಮನೆತನ ರಾಜಕಾರಣಿಯೊಬ್ಬರ ಪಿ.ಎ ಎಂದು ಹೇಳಿಕೊಂಡು ಹಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಕೆಲಸ ಮಾಡಿಕೊಡುವಂತೆ ಅವಾಜ್ ಹಾಕಿದ್ದಾನೆ. ತನ್ನ ವಯಕ್ತಿಕ ಕೆಲಸದ ಕುರಿತಾಗಿ ರಾಜಕಾರಣಿಯೊಬ್ಬರ ಹೆಸರು ದುರ್ಬಳಕೆ ಮಾಡಿಕೊಂಡ ಘಟನೆ ಅವರಿಗೂ ತಿಳಿದಿದೆ.
ಜಿಲ್ಲೆಯ ಹಿರಿಯ ಅಧಿಕಾರಿಗೆ ಪ್ರಭಾವಿ ರಾಜಕಾರಣಿಯ ಪಿ.ಎ ಎಂದು ನಕಲಿ ಹೆಸರಿನಿಂದ ಕರೆ ಮಾಡಿ ಸಂಪರ್ಕ ಸಾಧಿಸಿದ್ದಾನೆ. ಜೊತಗೆ ವೈಯಕ್ತಿಕ ಕೆಲಸವನ್ನು ಮಾಡಿಕೊಂಡಿದ್ದಾನೆ. ಇದಾದ ಕೆಲವು ದಿನಗಳ ಒಳಗೆ ಪ್ರಭಾವಿ ರಾಜಕಾರಣಿಗೆ ವಿಷಯ ತಿಳಿದಿದ್ದು ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕುತಿದ್ದಾರೆ.
ರಾಜಕಾರಣಿ ಹೆಸರು ಹೇಳಿಕೊಂಡು ಈ ರೀತಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸಿದ್ದು ಅವರೂ ಶಾಕ್ ಗೆ ಒಳಗಾಗಿದ್ದಾರೆ. ಜೊತೆಗೆ ಜಿಲ್ಲೆಯ ರಾಜಕಾರಣಿಗಳೂ ಕೆಲವು ಸಂದರ್ಭಗಳಲ್ಲಿ ಅವರ ಜೊತೆಗಿರುವವ ಕುರಿತು ಸ್ವಲ್ಪ ಎಚ್ಚರಿಕೆ ಹೆಜ್ಜೆ ಇಟ್ಟರೆ ಒಳಿತು.