
ಮುಜುಗರ ತಪ್ಪಿಸಿಕೊಳ್ಳಲು ಸಂಘಟನಾ ಚತುರ ಶಾಸಕನಿಗೆ ಜವಾಬ್ದಾರಿ ನೀಡಿದ ಬಿಜೆಪಿ

ಬೆಳಗಾವಿ : ವಾಯುವ್ಯ ಶಿಕ್ಷಕ ಹಾಗೂ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮುಜುಗರವಾಗಬಾರದು ಎನ್ನುವ ಉದ್ದೇಶದಿಂದ ಬಿಜೆಪಿ ಬೆಳಗಾವಿ ನಗರ ಘಟದ ಅಧ್ಯಕ್ಷ ಸ್ಥಾನವನ್ನು ಶಾಸಕ ಅನಿಲ್ ಬೆನಕೆ ಅವರಿಗೆ ನೀಡಲಾಗಿದೆ.
ಗೋವಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜನೇವರಿ 26 ರಂದು ತಮ್ಮದೆ ಅಶ್ಲೀಲ್ ಚಿತ್ರ ಬಿಜೆಪಿಯ ವಾಟ್ಸಪ್ ಗ್ರೂಪಗೆ ಬಿಟ್ಟು ಪಕ್ಷಕ್ಕೆ ಮುಜುಗರ ತಂದಿದ್ದ ಶಶಿ ಪಾಟೀಲ ಅವರನ್ನು ವಜಾ ಮಾಡಬೇಕಂಬ ಕೂಗು ಬಿಜೆಪಿ ಮಹಿಳಾ ಘಟಕದಲ್ಲಿಯೇ ಜೋರಾಗಿ ಕೇಳಿ ಬಂದಿತ್ತು. ಅಲ್ಲದೆ ಇದನ್ನು ಅಸ್ತ್ರವಾಗಿಸಿಕೊಂಡಿದ್ದ ಕಾಂಗ್ರೆಸ್ ಶಶಿ ಪಾಟೀಲಗೆ ಚಡ್ಡಿ ನೀಡುವುದರ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿತ್ತು. ಶಶಿ ಪಾಟೀಲ ವಿರುದ್ಧ ಎಲ್ಲಡೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ವಾಯುವ್ಯ ಶಿಕ್ಷಕ ಹಾಗೂ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮುಜುಗರವಾಗಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಬೆಳಗಾವಿ ನಗರ ಘಟಕದ ಅಧ್ಯಕ್ಷ ಸ್ಥಾನವನ್ನು ಸಂಘಟನಾ ಚತುರ, ಉತ್ತಮ ಕೆಲಸಗಾರರಾಗಿರುವ ಶಾಸಕ ಅನಿಲ ಬೆನಕೆ ಅವರಿಗೆ ನೀಡಲಾಗಿದೆ.
ಈ ಹಿಂದೆಯೂ ಅನಿಲ್ ಬೆನಕೆ ಬೆಳಗಾವಿ ನಗರ ಘಟಕದ ಅಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದಿದ್ದರು. ಇದನ್ನು ಪರಿಗಣಿಸಿ 2018 ವಿಧಾನ ಸಭೆಯ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ವಿರುದ್ಧ ಭರ್ಜರಿ ಗೆಲವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿ ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಮಾದರಿ ನಗರವನ್ನಾಗಿ ಮಾಡಿರುವ ಶ್ರೇಯ ಬೆನಕೆ ಅವರಿಗೆ ಸಲ್ಲುತ್ತದೆ. ಶಾಸಕರ ಜತೆ ಜತೆಗೆ ಬೆಳಗಾವಿ ನಗರ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿರುವುದು ಕಾರ್ಯಕರ್ತರು ಸ್ವಾಗತಿಸಿದ್ದಾರೆ.