Select Page

Advertisement

ಬೆಳಗಾವಿ : 11 ಪತ್ರಕರ್ತರು ಸೇರಿ ವಿವಿಧ ಕ್ಷೇತ್ರದ ಹಲವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಳಗಾವಿ : 11 ಪತ್ರಕರ್ತರು ಸೇರಿ ವಿವಿಧ ಕ್ಷೇತ್ರದ ಹಲವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಳಗಾವಿ : ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ವಿಭಾಗಗಳ 11 ಜನ ಪತ್ರಕರ್ತರಿಗೆ ಕರ್ನಾಟಕ ರಾಜ್ಯೋತ್ಸವ-2024ರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ 1 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ಕನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.

ಮುದ್ರಣ ಮಾಧ್ಯಮ ವಿಭಾಗ : ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾದ ಸುಭಾಷ್ ಮದ್ಧುರಾವ ಕುಲಕರ್ಣಿ ಹಾಗೂ ಉದಯವಾಣಿ ದಿನಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರರಾದ ಭೈರೋಬಾ ಶಿವಾಜಿ ಕಾಂಬಳೆ.
ಪತ್ರಿಕಾ ಛಾಯಾಗ್ರಾಹಕರ ವಿಭಾಗ : ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಛಾಯಾಗ್ರಾಹಕರಾದ ಏಕನಾಥ ರಾಮಚಂದ್ರ ಅಗಸಿಮನಿ.

ವಿದ್ಯುನ್ಮಾನ ಮಾಧ್ಯಮ ವಿಭಾಗ : ಪ್ರಜಾ ಟಿ.ವಿ. ಜಿಲ್ಲಾ ವರದಿಗಾರರಾದ ಚಂದ್ರು ಹಣಮಂತ ಶ್ರೀರಾಮುಡು ಮತ್ತು ಚಿಕ್ಕೋಡಿ ಸುವರ್ಣ ನ್ಯೂಸ್ ವರದಿಗಾರರಾದ ಮುಸ್ತಾಕ್‌ಅಹ್ಮದ್ ಸಯ್ಯದ್ ಹುಸೇನ್ ಪೀರಜಾದೆ.

ಟಿವಿ ಕ್ಯಾಮರಾಮೆನ್ ವಿಭಾಗ : ನ್ಯೂಸ್ ಫರ್ಸ್ಟ್ ಕ್ಯಾಮೆರಾಮನ್ ರೋಹಿತ ನಾರಾಯಣ ಶಿಂಧೆ ಮತ್ತು ಇನ್ ನ್ಯೂಸ್ ಛಾಯಾಗ್ರಾಹಕ ಸುಭಾನಿ ಇಮಾಮಸಾಬ್ ಮುಲ್ಲಾ.
ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರುಗಳ ವಿಭಾಗ:
ಸಮದರ್ಶಿ ದಿನಪತ್ರಿಕೆಯ ಸಂಪಾದಕರಾದ ಅಶ್ರಫ್ ಬಾಬಾಸಾಬ್ ಧಾರವಾಡಕರ.

ತಾಲೂಕು ವರದಿಗಾರರ ವಿಭಾಗ : ಚನ್ನಮ್ಮನ ಕಿತ್ತೂರಿನ ಪ್ರಜಾವಾಣಿ ದಿನಪತ್ರಿಕೆಯ ತಾಲೂಕು ವರದಿಗಾರರಾದ ಪ್ರದೀಪ ನೀಲಕಂಧರ ಮೇಲಿನಮನಿ ಮತ್ತು ಕಾಗವಾಡ ತಾಲೂಕಿನ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾದ ಸಿದ್ಧಯ್ಯ ಗಂಗಯ್ಯ ಹಿರೇಮಠ.

ಪತ್ರಿಕಾ ವಿತರಕರ ವಿಭಾಗ : ಬೈಲಹೊಂಗಲ್ ತಾಲೂಕಿನ ನೇಗಿನಹಾಳ ಗ್ರಾಮದ ಸದೆಪ್ಪ ಫಕೀರಪ್ಪ ಗರಗದ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ರಾಜ್ಯೋತ್ಸವ-2024ರ ಮಾಧ್ಯಮ ಪ್ರತಿನಿಧಿಗಳ ಸನ್ಮಾನ ಆಯ್ಕೆ ಸಮಿತಿ ಸಭೆಯಲ್ಲಿ ಏಳು ವಿಭಾಗಗಳಲ್ಲಿ ಈ 11 ಜನ ಪತ್ರಕರ್ತರುಗಳನ್ನು ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕನ್ನಡಪರ ಹೋರಾಟಗಾರರು, ವಿವಿಧ ಕ್ಷೇತ್ರಗಳ ಸಾಧಕರಿಗೆ ನ.1ರಂದು ಸನ್ಮಾನ

ಪ್ರತಿವರ್ಷದಂತೆ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಪರ ಹೋರಾಟಗಾರರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಜಿಲ್ಲಾಡಳಿತ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವುದು.

ನ.1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸನ್ಮಾನಿಸಲಿದ್ದಾರೆ. ಸನ್ಮಾನಿತರ ವಿವರ ಈ ಕೆಳಕಂಡಂತಿದೆ.

ಕನ್ನಡಪರ ಹೋರಾಟಗಾರರ ವಿಭಾಗ:

ಹೊಳೆಪ್ಪ ಭೀಮಪ್ಪ ಸುಲಧಾಳ(ಮಾರ್ಕಂಡೇಯ ನಗರ, ಬೆಳಗಾವಿ), ಮಾರುತಿ ಲಕ್ಕಪ್ಪ ಮಾನೋಜಿ(ಬೆಳಗಾವಿ), ಬಸವರಾಜ ಖಾನಪ್ಪನವರ(ಗೋಕಾಕ), ರಾಜು ಕೋಲಾ(ಬಾಳೆಕುಂದ್ರಿ ಕೆ.ಎಚ್), ಉದಯ ಪದ್ಮನ್ನವರ(ಗಾಂಧಿನಗರ, ಬೆಳಗಾವಿ), ರಮೇಶ್ ನಾಯ್ಕರ್(ಮಾರುತಿನಗರ, ಬೆಳಗಾವಿ), ಶ್ರೀಮತಿ ಫರೀದಾ ದೇವಲಾಪುರ(ಆಟೋನಗರ, ಬೆಳಗಾವಿ), ಗಿರೀಶ್ ಕಾಮಕರ(ಭಾಗ್ಯನಗರ, ಬೆಳಗಾವಿ), ಡಾ.ಎಸ್.ಡಿ.ಪಾಟೀಲ(ಕಾಕತಿ), ಜಗನ್ನಾಥ ಬಾಮನೆ(ಅಥಣಿ), ವಿನಯ ಢವಳಿ(ಖಾಸಬಾಗ, ಬೆಳಗಾವಿ), ಮನೋಹರ ಪುಡಕಲನಟ್ಟಿ(ಹನುಮಾನ ನಗರ, ಬೆಳಗಾವಿ).

ವಿವಿಧ ಕ್ಷೇತ್ರಗಳ ವಿಭಾಗ:

ಕುಮಾರ ಬಡಿಗೇರ(ಕಪ್ಪಲಗುದ್ದಿ, ರಾಯಬಾಗ), ಬಾಬುರಾವ್ ನಡೋಣಿ(ರಾಯಬಾಗ), ಮೀರಾಸಾಬ್ ಮಲಿಕ್ ಸಾಬ್ ನದಾಫ್(ಸವಸುದ್ದಿ, ರಾಯಬಾಗ), ಭೀಮಪ್ಪ ಶಿವಲಿಂಗ ಖಿಚಡೆ(ಖಿಚಡಿ ತೋಟ, ರಾಯಬಾಗ), ಗೋಪಾಲ ಚಿಪಣಿ(ಯಮಕನಮರಡಿ), ಮುತ್ತಪ್ಪ ಸವದಿ(ಖಾನಟ್ಟಿ, ಮೂಡಲಗಿ), ಆರ್.ಎ.ಬಾಳೇಕುಂದ್ರಿ(ಬೆಳಗಾವಿ), ವಿನೋದ ಜಗಜಂಪಿ(ಹೊಸ ವಂಟಮುರಿ), ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ(ಅಥಣಿ) ಹಾಗೂ ಆಶಾಜ್ಯೋತಿ ಎಸ್.ಎಸ್.ಟಿ. ಮಹಿಳಾ ಅಭಿವೃದ್ಧಿ ಸಂಸ್ಥೆ(ಬೆಳಗಾವಿ).

Advertisement

Leave a reply

Your email address will not be published. Required fields are marked *

error: Content is protected !!