
ವಿಧಾನ ಪರಿಷತ್ ಅಖಾಡದಲ್ಲಿ ಮೀಸೆ ಮಾವ : ಸುನಿಲ್ ಸಂಕ

ಬೆಳಗಾವಿ : ವಿಧಾನ ಪರಿಷತ್ತಿನ ವಾಯುವ್ಯ ಪದವೀಧರ ಕ್ಷೇತ್ರದಿಂದ ಸುನೀಲ್ ಸಂಕ ಹಾಗೂ ಶಿಕ್ಷಕರ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂರಾರು ಕಾರ್ಯಕರ್ತರ ಜೊತೆಗೂಡಿ ಆಗಮಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಾದ ಸುನೀಲ್ ಸಂಕ ಹಾಗೂ ಪ್ರಕಾಶ್ ಹುಕ್ಕೇರಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ.
ಶಿಕ್ಷಕರ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ನನ್ನ ಆಯ್ಕೆ ಮಾಡಿದ್ರೆ ಶಿಕ್ಷಕರ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ನಮಗೆ ಮತ ಹಾಕಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟರೆ ಪದವೀಧರರು, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮ್ಮ ಪರವಾಗಿ ನಾವು ಸದಾಕಾಲ ನಿಲ್ಲುತ್ತೇವೆ ಎಂದರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತಾನಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಪ್ರಕಾಶ ಹುಕ್ಕೇರಿ ಅವರು ಓರ್ವ ಒಳ್ಳೆಯ ಕೆಲಸಗಾರರು ಎಂಬುದನ್ನು ಈಗಾಗಲೇ ಅವರು ಸಾಬೀತು ಮಾಡಿದ್ದಾರೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಕೆಲಸ ಆಗಬೇಕಿದೆ. ಶಿಕ್ಷಕರಿಗೆ ಅನುಕೂಲ ಆಗುವ ಕಾರ್ಯಕ್ರಮಗಳು ಆಗಬೇಕಿವೆ. ಈ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಸುನೀಲ್ ಸಂಕ, ಶಿಕ್ಷಕರ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಇಬ್ಬರು ಆರಿಸಿ ಬರೋದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಬುದ್ಧ ಮತದಾರರಿಂದಲೇ ಬದಲಾವಣೇ ಶುರುವಾಗಲಿದೆ ಎಂಬ ವಿಶ್ವಾಸ ನಮಗಿದೆ. ಯಾವ ರೀತಿ ಮೊನ್ನೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಸಹೋದರ ಗೆಲ್ಲಿಸುವಲ್ಲಿ ಯಾವ ರೀತಿ ಸಹಕಾರ ನೀಡಿದ್ದಿರಿ, ಆಶೀರ್ವಾದ ಮಾಡಿದ್ದಿರಿ, ಒಗ್ಗಟ್ಟಾಗಿ ನಾವೆಲ್ಲಾ ದುಡಿದೇವು. ಅದರ ಪರಿಣಾಮ ಇಡೀ ರಾಜ್ಯದಲ್ಲಿಯೇ ನಮ್ಮ ಸಹೋದರ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿದ್ದಿರಿ. ಅದೇ ರೀತಿ ಇಡೀ ರಾಜ್ಯ ಇನ್ನೊಮ್ಮೆ ಬೆಳಗಾವಿ ಕಡೆ ಮುಖ ಮಾಡುವ ಹಾಗೆ ಈ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಲು ತಾವೆಲ್ಲರೂ ಸಹಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡರು.