
ಅಥಣಿ : ಶಂಕರಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಅಂದಾ ದರ್ಬಾರ್, ಸರ್ಕಾರದ ಆದೇಶಕ್ಕೂ ಇಲ್ಲಿ ಕಿಮ್ಮತ್ತಿಲ್ಲ

ಬೆಳಗಾವಿ : ಬಡವರ ಆರೋಗ್ಯ ಹಿತ ಕಾಯಬೇಕಿದ್ದ ವೈದ್ಯಾಧಿಕಾರಿಗಳೇ ಸರ್ಕಾರಿ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ನಿಯಮ ರೂಪಿಸುವ ಮೂಲಕ ರೋಗಿಗಗಳ ರಕ್ತ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಥಣಿ ತಾಲೂಕಿನ ಶಂಕರಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ನಿರ್ಧಿಷ್ಟ ಮೆಡಿಕಲ್ ಗಳಿಗೆ ಮಾತ್ರೆ ಬರೆದುಕೊಡುವುದು ಮಾತ್ರವಲ್ಲದೆ, ಜನ ಬೇರೆ ಮೆಡಿಕಲ್ ಗಳಲ್ಲಿ ಮಾತ್ರೆ ತಂದರೆ ಅವುಗಳನ್ನು ತಿರಸ್ಕರಿಸುವ ಮೂಲಕ ರೋಗಿಗಳ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ವೈದ್ಯಾಧಿಕಾರಿಗಳ ಮೇಲೆ ಇಷ್ಷೇ ಆರೋಪವಲ್ಲದೆ. ಆರೋಗ್ಯ ಕೇಂದ್ರದಲ್ಲಿ ರಕ್ತ ತಪಾಸಣೆ ಮಾಡುವ ವ್ಯವಸ್ಥೆ ಇದ್ದರೂ, ಖಾಸಗಿಯವರ ಕಡೆ ರಕ್ತ ತಪಾಸಣೆ ಮಾಡಿಸುವಂತೆ ಒತ್ತಡ ಹೇರಿ ಜನರಿಂದ ಹಣ ವಸೂಲಿ ಮಾಡುವ ಕೆಲಸ ನಡೆದಿದೆ. ಈ ಕುರಿತು ರೋಗಿಗಳು ಪ್ರಶ್ನೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಈಗಾಗಲೇ ಸಾರ್ವಜನಿಕರು ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮದ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.