Select Page

Advertisement

ಬೆಳಗಾವಿ – ಬೆಂಗಳೂರು ಲವ್ ಸ್ಟೋರಿ ; ಗೌಡ್ತಿಗೆ ಚಿಕ್ಕಬಳ್ಳಾಪುರದಲ್ಲೇ ಬೈಪಾಸ್

ಬೆಳಗಾವಿ – ಬೆಂಗಳೂರು ಲವ್ ಸ್ಟೋರಿ ; ಗೌಡ್ತಿಗೆ ಚಿಕ್ಕಬಳ್ಳಾಪುರದಲ್ಲೇ ಬೈಪಾಸ್

ಬೆಳಗಾವಿ : ಇನ್ಸ್ಟಾಗ್ರಾಮ್ ನಲ್ಲಿ ಹಾಯ್ ಅಂತ ಮೆಸೇಜ್ ಹಾಕಿದ್ದ. ನಾನು ಹಾಗೆಯೇ ಮೆಸೇಜ್ ಮಾಡಿದೆ. ಇಬ್ಬರ ನಡುವೆ ಪ್ರೀತಿ ಆಗಿತ್ತು. ನಂತರ ನಾನು ಅವನನ್ನು ಮದುವೆಯಾದೆ ಎಂದು ಸುಳ್ಳಿನ ರೈಲು ಬಿಟ್ಟಿದ್ದ ಪ್ರಿಯಾಂಕಾ ಗೌಡಳಿಗೆ ಚಿಕ್ಕಬಳ್ಳಾಪುರದಲ್ಲೇ ಬೈಪಾಸ್ ಇತ್ತು ಎಂಬುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಸ್ತೂರಬಾ ನಗರದ ಯುವತಿ ಪ್ರಿಯಾಂಕಾ(24) ಬೆಳಗಾವಿಯ ಅಲಾರವಾಡ ಗ್ರಾಮದ ರಾಹುಲ್ ಎಂಬ ಯುವಕ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದ ಸುದ್ದಿ ಸೋಮವಾರ ವೈರಲ್ ಆಗಿತ್ತು.

ಆದರೆ ಈ ಗೌಡ್ತಿ ಸ್ಟೋರಿ ಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಪ್ರಿಯಾಂಕಾ ಗೆ ಇದು ಮೊದಲನೆ ಮದುವೆಯಲ್ಲ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸುಧಾಕರ್ ಎಂಬುವವನ ಹೆಂಡತಿ ಎಂಬುದು ಬಯಲಾಗಿದೆ. ಈ ಕುರಿತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಮಹತ್ವದ ಮಾಹಿತಿ ಬಯಲಿಗೆಳೆಯುವ ಮೂಲಕ ಯುವತಿಯ ಮುಖವಾಡ ಬಯಲು ಮಾಡಿದ್ದಾರೆ.

ಯುವತಿಯ ಮಾಜಿ ಪತಿ ಸುಧಾಕರನ ಸ್ನೇಹಿತ ಗೋಪಾಲ ಹೇಳುವ ಪ್ರಕಾರ ಈ ಯುವತಿಗೆ ಇದು ಮೂರನೇ ಮದುವೆ. ಹಾಗೆಯೆ ಪ್ರತಿ ಮದುವೆಯಲ್ಲೂ ಇವಳು ಬಣ್ಣದ ಮಾತಾಡಿ ಜನರನ್ನು ಮರಳು ಮಾಡುತ್ತಾ ಬಂದಿದ್ದಾಳೆ. ಜೊತೆಗೆ ಇವಳು ಕೋಟಿ ಒಡತಿ ಅಲ್ಲ. ಸುಳ್ಳು ಹೇಳುವುದೇ ಕಾಯಕ ಎಂದು ಯುವತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

Advertisement

Leave a reply

Your email address will not be published. Required fields are marked *

error: Content is protected !!