Select Page

ಮಾರ್ಚ್ 06 ರಂದು ಅಥಣಿಗೆ ಸಿಎಂ ಸಿದ್ದರಾಮಯ್ಯ ಆಗಮನ

ಮಾರ್ಚ್ 06 ರಂದು ಅಥಣಿಗೆ ಸಿಎಂ ಸಿದ್ದರಾಮಯ್ಯ ಆಗಮನ

ಅಥಣಿ : ಅಥಣಿ ತಾಲೂಕಿನ ಪೂರ್ವ ಭಾಗದ  ಸು. 12 ಹಳ್ಳಿಗಳ ರೈತರ ಜಮೀನುಗಳಿಗೆ  ನೀರಾವರಿ ಸೌಲಭ್ಯ ಒದಗಿಸಲಾಗುವ  ಅಮ್ಮಾಜೇಶ್ವರಿ  ಕೊಟ್ಟಲಗಿ ಏತ  ನೀರಾವರಿ ಯೋಜನೆಯ ಶಂಕು ಸ್ಥಾಪನೆ ಸಮಾರಂಭಕ್ಕೆ  ಇದೇ  ಮಾರ್ಚ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿದಂತೆ  ಅನೇಕ ಸಚಿವರು ಮತ್ತು ಶಾಸಕರು ಆಗಮಿಸಲಿದ್ದಾರೆ. ಪಕ್ಷದ ಎಲ್ಲಾ ಮುಖಂಡರು  ಮತ್ತು ಕಾರ್ಯಕರ್ತರು  ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.

ಅವರು ಗುರುವಾರ ಸಾಯಂಕಾಲ  ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ  ವಿವಿಧ ಗ್ರಾಮಗಳ ರೈತ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಕೊನೆಯ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬುದು  ನನ್ನ ಬಹುದಿನಗಳ ಕನಸಾಗಿತ್ತು. ಈ ನೀರಾವರಿ ಯೋಜನೆಯನ್ನು  ಅನುಷ್ಠಾನಗೊಳಿಸುವ ಮೂಲಕ ರೈತರ ಜಮೀನುಗಳಿಗೆ  ಪೈಪಲೈನ್ ಮೂಲಕ  ನೀರಾವರಿ ಸೌಲಭ್ಯ ಒದಗಿಸಲಾಗುವುದು. 

ನನ್ನ ಪರವಾಗಿ ರೈತರಿಗೆ ಮಾತು ಕೊಟ್ಟು ಮತ ಕೇಳಿದ ನನ್ನ ಎಲ್ಲಾ ಕಾರ್ಯಕರ್ತರ ಮತ್ತು ಮುಖಂಡರ ವಿಶ್ವಾಸ ಉಳಿಸಿಕೊಂಡು ನುಡಿದಂತೆ ನಡೆಯುತ್ತೇನೆ. ತಮಗೆ ಕೊಟ್ಟ ಭರವಸೆಯಂತೆ  ಈ ನೀರಾವರಿ ಯೋಜನೆಯ ಮೂಲಕ  ಈ ಬರದ ನಾಡಿಗೆ  ಹಸಿರು ಸೀರೆ ಉಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಸವದಿ ಹೇಳಿದರು.

ಸಣ್ಣ ನೀರಾವರಿ ಇಲಾಖೆಯ ಮೂಲಕ ತಾಲೂಕಿನ 8 ಕೆರೆಗಳನ್ನ ತುಂಬುವ  ಕೆಲಸಕ್ಕೆ ಸಿದ್ಧತೆ  ಮಾಡಿಕೊಳ್ಳಲಾಗಿದೆ. ಇದಲ್ಲದೆ ಐದು ಕೆರೆಗಳನ್ನು ಅವಶ್ಯಕತೆ ಗ್ರಾಮಗಳಲ್ಲಿ ನಿರ್ಮಿಸಿ  ನೀರು ತುಂಬಿಸುವ ಕೆಲಸ ಮಾಡಲಾಗುವುದು. ಎರಡು ಯೋಜನೆಗಳಿಗೆ  ಸರ್ಕಾರ ಅನುದಾನ ನೀಡಿರುವುದು ಸಾರ್ಥಕವಾಯಿತು ಎನ್ನುವ ನಿಟ್ಟಿನಲ್ಲಿ  ಮುಖ್ಯಮಂತ್ರಿ ಹಾಗೂ  ಉಪಮುಖ್ಯಮಂತ್ರಿಗಳು ಆಗಮನದ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರೈತ ಮುಖಂಡರಲ್ಲಿ ಕರೆ ನೀಡಿದರು.

ಇವಳೇ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ  ಪರಪ್ಪಾ ಸವದಿ,  ಮುಖಂಡರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳಿ, ಲಕ್ಷ್ಮಣರಾವ  ಚಿಂಗಳೆ, ಸಿದರಾಯ ಯಲ್ಲಡಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Athani Laxman Savadi Siddaramayha Congress

Advertisement

Leave a reply

Your email address will not be published. Required fields are marked *