ಹುಕ್ಕೇರಿ ಶ್ರೀ ಆಶಿರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್
ಬೆಳಗಾವಿ : ನಗರದ ಲಕ್ಷ್ಮೀಟೇಕಡಿಯ ಹುಕ್ಕೇರಿ ಹಿರೇಮಠಕ್ಕೆ ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಉತ್ತರದ ಅಭ್ಯರ್ಥಿ ಡಾ. ರವಿ ಪಾಟೀಲರು ಭೇಟಿ ನೀಡಿ ಪೂಜ್ಯ ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರ ಆಶೀರ್ವಾದವನ್ನು ಪಡೆದರು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಮಾತನಾಡಿ ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಗೆಲುವಾಗುವಂತೆ ಪೂಜ್ಯರ ಆಶೀರ್ವಾದಕ್ಕಾಗಿ ಮನವಿ ಮಾಡಿದರು. ಸಮಾಜದ ಪ್ರಮುಖರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ ರವಿ ಪಾಟೀಲ ಮಾತನಾಡಿ ಬೆಳಗಾವಿ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಜೀಯವರು, ಹುಕ್ಕೇರಿಯ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರು, ಕಾರಂಜಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಜೀಯವರು, ನಿಲಜಿಯ ಅಲೌಕಿಕ್ ಧ್ಯಾನ ಮಂದಿರದ ಶ್ರೀ ಶಿವಾನಂದ ಗುರೂಜಿಯವರು, ಶ್ರೀ ನಿಶ್ಚಲಾನಂದ ಸ್ವಾಮೀಜಿಯವರು ಸೇರಿದಂತೆ ಅನೇಕ ಗುರು ಹಿರಿಯರು ಹಾಗೂ ವಿವಿಧ ಸಮಾಜಗಳ ಮುಖಂಡರು ನನಗೆ ಆಶೀರ್ವದಿಸುತ್ತ ಬಂದಿದ್ದು, ಮುಂದೆಯೂ ನನಗೆ ಆಶೀರ್ವದಿಸಿ ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಹಕರಿಸಬೇಕೆಂದು ವಿನಂತಿಸಿದರು.