ಚೆನ್ನಮ್ಮ ಫೌಂಡೇಶನ್ ವತಿಯಿಂದ ಅಥಣಿಯಲ್ಲಿ ಗ್ರಂಥಾಲಯ ಉದ್ಘಾಟನೆ
ಅಥಣಿ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾನುವಾರ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಅಥಣಿ ಪಟ್ಟಣದ ದೇಶಪಾಂಡೆ ಗಲ್ಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ. ತಾಲೂಕು ಕೇಂದ್ರಗಳಲ್ಲಿ ಯುವಕರು ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ದೇಶಕ್ಕೆ ಸಮರ್ಪಣಾ ಮನೋಭಾವ ಹೊಂದಿರುವ ಯುವಕರ ಅವಶ್ಯಕತೆ ಇದ್ದು ಇಂತಹ ಕರ್ಯಗಳು ಮತ್ತಷ್ಟು ನಡೆಯಲಿ ಎಂದರು.
ಕಾರ್ಯಕ್ರಮದ ಅತಿಥಿಯಾದ ಉಪನ್ಯಾಸ ಮಹಾಲಿಂಗ ಮೇತ್ರಿ ಮಾತನಾಡಿ. ಪುಸ್ತಕ ಎಂಬುದು ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಗ್ರಂಥಾಲಯಗಳನ್ನು ಸರಿಯಾದ ರೀತಿಯಲ್ಲಿ ಇಂದಿನ ಯುವ ಸಮೂಹ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಈ ಸಮಾಜದ ಬದಲಾವಣೆ ಸಹಕಾರಿಯಾಗುತ್ತದೆ ಎಂದರು.
ಚನ್ನಮ್ಮ ಫೌಂಡೇಶನ್ ವತಿಯಿಂದ ನಡೆದಿದ್ದ ಭಾಷಣ ಸ್ಪರ್ಧೆ ವಿಜೇತರನ್ನು ಈ ಸಂದರ್ಭದಲ್ಲಿ ಘೋಷಣೆ ಮಾಡಲಾಯಿತು. ಪ್ರಥಮ ಬಹುಮಾನವನ್ನು ಚನ್ನಬಸಪ್ಪ ಕುಬಸದ, ದ್ವಿತೀಯ ಭಹುಮಾನ ಮೃತ್ಯುಂಜಯ ಕಬ್ಬೂರ ಹಾಗೂ ಪೂಜಾ ತಿರ್ಥಹಳ್ಳಿ, ತೃತೀಯ ಬಹುಮಾನವನ್ನು ಜಗದೀಶ್ ಡಿಕೆ. ವಿಶೇಷ ಬಹುಮಾನವನ್ನು ಭವಾನಿ ಹುಡೆದ್ ಪಡೆದುಕೊಂಡರು.