
ಮೋದಿ ಸರ್ಕಾರದಿಂದ ಐತಿಹಾಸಿಕ ಬಜೆಟ್ ಮಂಡನೆ ; ಡಾ. ಸೋನಾಲಿ ಸರ್ನೋಬತ್

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿರುವ ಬಜೆಟ್ ಐತಿಹಾಸಿಕವಾಗಿದೆ. ಈ ಬಜೆಟ್ ನಿಂದ ರೈತರು, ಮಹಿಳೆಯರು, ಜನಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ಅನುಕೂಲಕರವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಕೇಂದ್ರ ಬಜೆಟ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ, ನವೋದ್ಯಮಗಳಿಗೂ ಪ್ರಯೋಜನವಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ ಅನ್ನು 12 ಲಕ್ಷಕ್ಕೆ ವಿಸ್ತರಿಸಲಾಗಿದೆ, ಇದು ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಿದೆ.
ದಿನಗೂಲಿ ಕೆಲಸಗಾರರಿಗೆ ಈ ಬಜೆಟ್‌ನಿಂದ ಹಲವು ಸಹಾಯಗಳು ಸಿಗುತ್ತವೆ. ಕ್ಯಾನ್ಸರ್ ಔಷಧಗಳಿಗೆ ವಿನಾಯಿತಿ ನೀಡಲಾಗಿದೆ. ಒಟ್ಟಾರೆಯಾಗಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣಕ್ಕೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.