ಕನ್ನಡ ಚಿತ್ರರಂಗದ ಧ್ರುವತಾರೆ, ಕರುನಾಡ ಹೆಮ್ಮೆಯ ಕರ್ನಾಟಕ ರತ್ನ (Karnataka Ratna) ಡಾ. ಪುನೀತ್ ರಾಜಕುಮಾರ್ (Puneeth Rajkumar) ನಮ್ಮನ್ನಗಲಿ ಇದೀಗ (ಅಕ್ಟೋಬರ್ 29) ಬರೋಬ್ಬರಿ ಐದು ವರ್ಷಗಳು ಕಳೆದಿವೆ. ಕಾಲ ಎಷ್ಟು ವೇಗವಾಗಿ ಉರುಳಿದರೂ, ಅಪ್ಪು ಇಲ್ಲ ಎಂಬ ಕಟು ಸತ್ಯವನ್ನು ಎಂದಿಗೂ ಅವರ ಕೊಟ್ಟಂತವರ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.

ತಮ್ಮ ಸರಳತೆ, ಮುದ್ದು ನಗೆ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಪ್ರತಿಯೊಬ್ಬರ ಹೃದಯದಲ್ಲೂ ನೆಲಸಿರುವ ಪುನೀತ್ ರಾಜಕುಮಾರ್ ಅವರ ಪುಣ್ಯತಿಥಿಯಿಂದ ಇದೇ ನಾಡೇ ಅವರನ್ನು ಪ್ರೀತಿಯಿಂದ ಸ್ಮರಿಸಿದೆ.

2021ರ ಅಕ್ಟೋಬರ್ 29ರ ಆ ಶುಕ್ರವಾರ ಇಡೀ ಕರ್ನಾಟಕವೇ ಸ್ತಬ್ಧವಾಗಿತ್ತು. ಎಂದಿನಂತೆ ಮುಂಜಾನೆ ಜಿಮ್‌ನಲ್ಲಿ ಕಸರತ್ತು ಮುಗಿಸಿದ ಬಳಿಕ ಪುನೀತ್ ಅವರಿಗೆ ಆಯಾಸ ಕಾಣಿಸಿಕೊಂಡು, ಆಸ್ಪತ್ರೆಗೆ ತಲುಪಿದಾಗಲೇ ತಕ್ಷಣವೇ ಕುಸಿದುಬಿದ್ದರು. ಹೃದಯಾಘಾತಕ್ಕೆ ಒಳಗಾದ ವೈದ್ಯರಾದ ಡಾ. ರಮಣ್ ರಾವ್ ಅವರ ಕ್ಲಿನಿಕ್‌ಗೆ ತೆರಳಿದಾಗ,

ಗಂಭೀರತೆ ಅರಿತ ವೈದ್ಯರು ಕೂಡಲೇ ದೊಡ್ಡ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಆದರೆ, ವಿಧಿಯಾಟ ಬೇರೆ ಇತ್ತು; ಆಸ್ಪತ್ರೆ ತಲುಪುವ ಮಾರ್ಗಮಧ್ಯದಲ್ಲೇ ತೀವ್ರ ಹೃದಯಾಘಾತದಿಂದ ಅಪ್ಪು ಕೊನೆಯುಸಿರೆಳೆದಿದ್ದರು. ಆ ಒಂದು ದುಃಖ ಇಡೀ ಭಾರತೀಯ ಚಿತ್ರರಂಗವನ್ನೇ ಆಘಾತದ ಕೂಪಕ್ಕೆ ತಳ್ಳಿತ್ತು.

ಕಂಠೀರವ ಸ್ಟೂಡಿಯೋದಲ್ಲಿ ಹವಿನ ಅಲಂಕಾರ, ವಿಶೇಷ ಪೂಜೆ : ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಅವರ ಪುಣ್ಯಭೂಮಿಯನ್ನು ಆಕರ್ಷಕವಾಗಿ ಬಗೆಬಗೆಯ ಹೂವುಗಳಿಂದ ಶೃಂಗರಿಸಲಾಗಿದೆ.

ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಹಲವು ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಮಾರಕದ ದರ್ಶನಕ್ಕೆ ಬರುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸುತ್ತಿದ್ದಾರೆ. ಈ ವಿಶೇಷ ದಿನದಂದು ರಾಜ್ ಕುಟುಂಬದವರು ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದ್ದಾರೆ.

ಸೇವಾ ಕಾರ್ಯಗಳ ಮೂಲಕ ಅಪ್ಪು ಸ್ಮರಣೆ :
ಕೇವಲ ಬೆಳ್ಳಿತೆರೆಯ ನಾಯಕನಾಗಿ ಮಾತ್ರವಲ್ಲದೆ, ನೂರಾರು ಜನೋಪಯೋಗಿ ಸಮಾಜಸೇವೆಯ ಮೂಲಕ ನಿಜ ಜೀವನದಲ್ಲೂ ಆದರ್ಶ ನಾಯಕನಾಗಿ ಮೆರೆದವರು ಅಪ್ಪು. ಅವರ ಅದೇ ಹಾದಿಯಲ್ಲಿ ಸಾಗುತ್ತಿರುವ ಅಭಿಮಾನಿ ಬಳಗಗಳು ನಾಡಿನಾದ್ಯಂತ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ.