Select Page

Advertisement

ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು ನಿಜವಾ?

ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು ನಿಜವಾ?

ಮಾಜಿ ಬಿಗ್ ಬಾಸ್ ಕನ್ನಡದ ಸ್ಪರ್ಧಿ, ಪತ್ರಕರ್ತ, ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಕೀರ್ತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ದಟ್ಟವಾಗಿದ್ದು ಅವರ ಈ ಹಿಂದಿನ ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಇದಕ್ಕೆ ಇಂಬು ನೀಡುತ್ತಿವೆ.

ಹೌದು ಕಾಲೇಜು ಕಾರ್ಯಕ್ರಮದಲ್ಲಿ ಭೇಟಿಯಾದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಅವರ ಮಧ್ಯೆ ಪ್ರೀತಿ ಹುಟ್ಟಿಕೊಂಡು ಸುಂದರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮುದ್ದಾದ ಗಂಡು ಮಗು ಕೂಡಾ ಸಾಕ್ಷಿ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಹಾಕುತ್ತಿರುವ ಈ ಇಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದಂತು ತಿಳಿದುಬರುತ್ತಿದೆ.

ಹೌದು ಪತ್ರಕರ್ತನಾಗಿ ವೃತ್ತಿ ಬದುಕು ಆರಂಭಿಸಿದ್ದ ಕಿರಿಕ್ ಕೀರ್ತಿ ನಂತರ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅವರ ಬದುಕು ನಡೆದುಕೊಂಡು ಸಾಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡ ನಂತರವಂತೂ ಅವರ ಅಭಿಮಾನಿಗಳ ವರ್ಗ ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗಿತ್ತು. ಜೊತೆಗೆ ಮುದ್ದಾದ ಮಡದಿ ಜೊತೆ ಉತ್ತಮ ಬದುಕು ಸಾಗಿಸುತ್ತಿದ್ದ ಇವರ ಜೀವನದಲ್ಲಿ ಸಧ್ಯ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ.

ಅರ್ಪಿತಾ ಹಾಗೂ ಕೀರ್ತಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದವರು. ಇವರ ಪ್ರೇಮ್ ಕಹಾನಿ ಸಾಕಷ್ಟು ಶೋಗಳಲ್ಲಿ ಇಬ್ಬರೂ ಸಹ ಹೇಳಿಕೊಂಡಿದ್ದು ಮದುವೆಯ ಸಮಯದಲ್ಲಿ ಸಾಕಷ್ಟು ವಿರೋಧಗಳ ನಡುವೆಯೂ ಇವರೇ ಬೇಕು ಎಂದು ಹಟ ಹಿಡಿದು ಸಾಕಷ್ಟು ದಿನ ಊಟ ಬಿಟ್ಟು ಮದುವೆಯಾಗಿದ್ದವರು. ಆದರೆ ಮದುವೆಯಾದ ನಂತರ ಬದುಕು ನಿಜವಾದ ಪಾಠಗಳನ್ನು ಕಲಿಸಲಾರಂಭಿಸಿತು.

ಜಿವನದಲ್ಲಿ ಸಾಕಷ್ಟು ಏರುಪೇರುಗಳಾದವು.ಕೀರ್ತಿ ಆರ್ಥಿಕವಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದರು.. ಅವರ ಜೀವನಶೈಲಿಯು ಒಂದು ಹಂತ ಕೆಳಗೆ ಬಂದಿತ್ತು. ಆದರೆ ಅರ್ಪಿತಾ ಅವರು ಮಾತ್ರ ಸದಾ ಕೀರ್ತಿ ಅವರ ಜೊತೆಯಾಗಿ ನಿಂತಿದ್ದರು. ಇನ್ನು ದಿನಗಳು ಕಳೆದಂತೆ ಅವರ ಜೀವನ ಸುಧಾರಿಸಿತ್ತು. ಇತ್ತ ಬಿಗ್ ಬಾಸ್ ಗೂ ಕಾಲಿಟ್ಟ ಕೀರ್ತಿ ರನ್ನರ್ ಅಪ್ ಆಗಿ ಹೊರ ಬಂದರು.. ಬಿಗ್ ಬಾಸ್ ನಿಂದ ಬಂದ ನಂತರ ಶೋಗಳಲ್ಲಿ ನಿರೂಪಕರಾಗಿ ಹಾಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಇನ್ನು ಇತ್ತ ಅರ್ಪಿತಾ ಅವರೂ ಕೂಡ ತೆರೆ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದ್ದು ಧಾರಾವಾಹಿಯಲ್ಲಿಯೂ ಅವಕಾಶ ದೊರಕಿತ್ತು.

ಈಗ ಕೀರ್ತಿ ಮತ್ತು ಅರ್ಪಿತಾ ಇಬ್ಬರೂ ಸಹ ದೂರಾಗಿರೋದು ನಿಜ.. ಈ ಬಗ್ಗೆ ಇಬ್ಬರೂ ನೇರವಾಗಿ ಹೇಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಅತ್ತ ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಕೀರ್ತಿ ಎಂಬ ಹೆಸರನ್ನು ತೆಗೆದು ಹಾಕಿದ್ದಾರೆ.

ಕಳೆದ ಆರೇಳು ತಿಂಗಳುಗಳಿಂದಲೂ ಇಬ್ಬರು ಒಟ್ಟಾಗಿ ಇಲ್ಲ ಎಂದು ತಿಳಿದು ಬಂದಿದೆ. ಅದರಲ್ಲೂ ಇಬ್ಬರೂ ದೂರಾಗಿರೋದರ ಬಗ್ಗೆ ಜನರು ಕೇಳುವರೆಂದು ಕಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿ ಪೋಸ್ಟ್ ಗಳು ವೀಡಿಯೋಗಳನ್ನು ಹಾಕುತ್ತಿದ್ದಾರೆ. ಹೌದು ಮೊದಲಿಗೆ ಕೀರ್ತಿ ಅವರು ಒಂದಷ್ಟು ದಿನಗಳ ಹಿಂದೆ ವ್ಯಯಕ್ತಿಕ ಜೀವನದಲ್ಲಿ ಆದ ಘಟನೆಯಿಂದಾಗಿ ಜೀವನವನ್ನು ಮುಗಿಸುವ ನಿರ್ಧಾರಕ್ಕೂ ಬಂದಿದ್ದೆ. ಆದರೆ ಮತ್ತೆ ಜೀವನದಲ್ಲಿ ಗೆಲ್ಲಬೇಕೆಂದು ಬರುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದರು.

ಇತ್ತ ಕೀರ್ತಿ ಅವರ ಸಾಲು ಸಾಲು ಪೋಸ್ಟ್ ಗಳ ನಡುವೆಯೇ ಅರ್ಪಿತಾ ಅವರು ಸಹ ಕೆಲವೊಂದು ವಿಚರಾಗಳನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು 2022 ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ ಎಂದಿದ್ದಾರೆ.. ಜೊತೆಗೆ  ಸೂತ್ರದಾರನ ಜೊತೆಗೆ ಸಮರ.. ತಡೆಯಲಾಗದೇ ಈ ಪ್ರಹಾರ ಹಾಡನ್ನು ಹಾಕಿಕೊಂಡು.

ಯಾರು ಇದಕೆ ಹೊಣೆಯೋ. ಯಾರು ಬಯಸದ ಕೊನೆಯೋ. ತ್ಯಜಿಸುವೆ ಶಪಿಸುವೆ ಕ್ಷಮೆ ಇರದ ಬರವಣಿಗೆ. ಎಂದು ಬರೆದಿದ್ದು ಇನ್ನು ಕೀರ್ತಿ ಅವರ ನಿನ್ನೆ ಆಡಿದ ನನ್ನ ಜೀವನದಲ್ಲಿ ಕೆಟ್ಟ ಘಟನೆ ನಡೆದ ನಂತರ ಎಲ್ಲವೂ ಒಳ್ಳೇದೆ ಆಗ್ತಿದೆ ಅನ್ನೋ ಮಾತುಗಳಿಗೆ ಉತ್ತರ ಕೊಟ್ಟಂತೆ ಅರ್ಪಿತ ಆವರು ನಮ್ಮನ್ನು ಕುಗ್ಗಿಸಲು ಪ್ರಯತ್ನ ಮಾಡುವ ವ್ಯಕ್ತಿಗಳನ್ನು ನಾವು ಪದೇ ಪದೇ ತಡೆದುಕೊಳ್ಳುವ ಅಗತ್ಯ ಇಲ್ಲ ಎಂದು ಹಾಕಿದ್ದಾರೆ.

ಒಟ್ಟಿನಲ್ಲಿ ಸುಂದರವಾಗಿದ್ದ ಕಿರಿಕ್ ಕೀರ್ತಿ ಹಾಗೂ ಅರ್ಪಿತ ಅವರ ಬಾಳಲ್ಲಿ ಎದ್ದಿರುವ ಬಿರುಗಾಳಿ ಕುರಿತು ಹರಡಿರುವ ಸುದ್ದಿಗಳಿಗೆ ಖುದ್ದು ಅವರೇ ಸ್ಪಷ್ಟನೆ ನೀಡಿದರೆ ಒಳಿತು.

Advertisement

Leave a reply

Your email address will not be published. Required fields are marked *