
Breaking – ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ಆದೇಶ

ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಕಳೆದ 115 ದಿನಗಳಿಂದ ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ 57 ನೇ ಸಿಸಿಹೆಚ್ ನ್ಯಾಯಾಲಯ ಕೊನೆಗೂ ಆದೇಶ ನೀಡಿದ್ದು ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.
ದರ್ಶನ್ ಪರವಾಗಿ ವಕಿಲ ಸಿ.ವಿ ನಾಗೇಶ್ ವಾದ ಮಾಡಿದ್ದರೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪ್ರಸನ್ನ ಕುಮಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇಬ್ಬರೂ ವಕೀಲರ ವಾದ, ಹಾಗೂ ಪ್ರತಿವಾದ ಆಲಿಸಿದ್ದ ಕೋಟ್೯ ಮಹತ್ವದ ಆದೇಶ ನೀಡಿದೆ.
ಇನ್ನೂ ಪ್ರಕರಣದ A-8 ಆರೋಪಿ ರವಿಶಂಕರ್. A- 13 ಆರೋಪಿ ದೀಪಕ್ ಎಂಬುವವರಿಗೆ ಜಾಮೀನು ಲಭಿಸಿದೆ.