Select Page

Advertisement

ನಮ್ಮ ಹೋರಾಟಕ್ಕೆ ಸಿಎಂ ಸ್ಪಂದಿಸುತ್ತಿಲ್ಲ : ಸರ್ಕಾರದ ವಿರುದ್ಧ ಕೂಡಲಸಂಗಮ ಶ್ರೀ ಆಕ್ರೋಶ

ನಮ್ಮ ಹೋರಾಟಕ್ಕೆ ಸಿಎಂ ಸ್ಪಂದಿಸುತ್ತಿಲ್ಲ : ಸರ್ಕಾರದ ವಿರುದ್ಧ ಕೂಡಲಸಂಗಮ ಶ್ರೀ ಆಕ್ರೋಶ

ಅಥಣಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದಷ್ಟು ಈಗಿನ ಸಿಎಂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲಾ ಎಂದು ಕೂಡಲಸಂಗಮದ ಜಗದ್ಗುರು ಬಸವಜಯ ಮೃತುಂಜ್ಯಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಅಥಣಿ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಪಂಚಮಸಾಲಿಗಳ ಸಹಾಯ ಸಹಕಾರ ಬಹಳಷ್ಟು ಇದೆ, ಆದರೆ ಅದರ ಋಣ ತೀರಿಸಲು ಮುಖ್ಯಮಂತ್ರಿಯವರು ಪ್ರಯತ್ನ ಮಾಡಬೇಕು.

ಅದರಂತೆ ಕಾಂಗ್ರೆಸ್ ಸರಕಾರದಲ್ಲಿ 12 ಜನ ಪಂಚಮಸಾಲಿ ಶಾಸಕರಿದ್ದು, ನಾವು ಅಧಿವೇಶನದಲ್ಲಿ ಮಾತನಾಡುತ್ತಿವಿ ಎಂದು ಹೇಳಿ ಯಾರು ಸಹ ಬಸನಗೌಡಾ ಪಾಟೀಲ ಯತ್ನಾಳ ಅವರಂತೆ ಮಾತನಾಡಲಿಲ್ಲಾ, ಇದು ಸಮುದಾಯದ ಜನತೆಗೆ ಬೇಸರ ತಂದಿದೆ ಎಂದರು.

ನ್ಯಾಯವಾದಿಗಳು ಕಾನೂನು ಅರಿತವರು ಅವರು ಹೋರಾಟ ಮಾಡಿದರೆ ನಮ್ಮಗೆ ಮೀಸಲಾತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅದಕ್ಕಾಗಿ ಸೆಪ್ಟೆಂಬರ್ 22 ರಂದು ಬೆಳಗಾವಿಯಲ್ಲಿ ಜರಗುವ ವಕೀಲರ ಪ್ರಥಮ ಪರಿಷತ್ತಿಗೆ ಎಲ್ಲರೂ ಭಾಗವಹಿಸಿ ಸರಕಾರದ ವಿರುದ್ಧ ಕೈಗೊಳ್ಳದ ಹೋರಾಟದ ಬಗ್ಗೆ ಸಲಹೆ ನೀಡುವಂತೆ ಹೇಳಿದರು.

ಈ ವೇಳೆ ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಮಾತನಾಡಿ ನೀವು ನಿಮಗಾಗಿ ತುಂಬಾ ಹೋರಾಟ ಮಾಡುತ್ತಿದ್ದಿರಿ , ನಿಮಗೆ ನಾವು ಅಭಾರಿಯಾಗಿದ್ದೇವೆ , ಆದರೆ ನಾವು ಇನ್ನೂ ಒಗ್ಗಟ್ಟು ಪ್ರದರ್ಶನ ಮಾಡಲೂ ಹಿಂದೇಟು ಹಾಕುತ್ತಿರುವದು ಬೇಸರದ ಸಂಗತಿಯಾಗಿದೆ ಎಂದ ಅವರು

ಇನ್ನಾದರೂ ಎಲ್ಲರೂ ಒಗ್ಗಟ್ಟಾಗಿ ಶ್ರೀಗಳ ಹೋರಾಟವನ್ನ ಯಶಸ್ವಿ ಮಾಡೋಣಾ ಎಂದು ಕಿವಿ ಮಾತು ಹೇಳಿದರು .
ಈ ವೇಳೆ ನ್ಯಾಯವಾದಿಗಳಾದ ಬಿ.ಬಿ.ಹೋನಗೌಡರ, ಸುಭಾಷ್ ನಾಯಿಕ , ಸುನೀಲ ಸಂಕ , ಡಿ.ಬಿ.ಠಕ್ಕಣ್ಣವರ,

ಬಸವರಾಜ ಡಂಗಿ , ಎಮ.ಸಿ.ದುಂಡಿ , ಪಿ.ಬಿ.ಪಾಟೀಲ , ಬಿ.ಬಿ.ಬಿಸಗುಪ್ಪಿ , ಕಾಕಾಸಾಬ ಪಾಟೀಲ , ಎಸ್.ಎಸ್.ಪಾಟೀಲ , ಬಿ.ಬಿ.ಬಿಸಲಾಪುರ ರಾಹುಲ ಕಟಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!