
ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಪಂಚಾಯತಿ ಸದಸ್ಯರ ಪ್ರತಿಭಟನೆ

ಕಾಗವಾಡ : ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬದಲಾವಣೆ ಮಾಡುವಂತೆ ಆಗ್ರಹಿಸಿ ಉಗಾರ ಬುದ್ರಕ್ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಉಗಾರ ಬುದ್ರಕ್ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸೇರಿಕೊಂಡು ಪಂಚಾಯತಿ ಸಿಬ್ಬಂದಿಗಳನ್ನು ಹೊರ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪಿಡಿಒ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಇಓ ವೀರಣ್ಣಾ ವಾಲಿ ಪ್ರತಿಭಟನೆ ನಿರತ ಸದಸ್ಯರ ಜೊತೆ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಒಂದು ವಾರದ ಒಳಗಾಗಿ ನಿಮ್ಮ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿದರು.
ಈ ಸಮಯದಲ್ಲಿ ಗ್ರಾ.ಪಂ. ಸದಸ್ಯರಾದ ಮುನಾಫ ಚೌಧರಿ, ಸುನಂದಾ ಸನದಿ, ನಜೀರ ಪಠಾಣ, ಸಾಗರ ಪೂಜಾರಿ, ರಾಹುಲ ಭೋಸಲೆ, ಉಜ್ವಲಾ ಚೌಗುಲೆ ಸೇರಿ ಅನೇಕರು ಉಪಸ್ಥಿತರಿದ್ದರು.