
Mysore ಸಂಸದ ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಲು ಯತ್ನಿಸಿದ್ದು ಇವರೇ ನೋಡಿ…!

ಬೆಂಗಳೂರು : ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ( Pratap simha )ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆ ಎಂಬ ಸುದ್ದಿ ಸಧ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಈ ನಡುವೆ ಟಿಕೆಟ್ ತಪ್ಪಿಸಲು ಯತ್ನಿಸಿದ್ದು ಯಾರು ಎಂಬ ಪ್ರಶ್ನೆಗೆ ಕೆಲ ಉತ್ತರಗಳು ದೊರಕಿವೆ.
ಮೈಸೂರು ಟಿಕೆಟ್ ಗಾಗಿ ಕೆಲ ಲಾಬಿ ಜೋರಾಗಿವೆ. ಈ ನಡುವೆ ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಅವರ ಹೆಸರೂ ಮುಂಚೂಣಿಯಲ್ಲಿ ಬಂದಿದೆ. ಸಧ್ಯ ಇವರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ದೆಹಲಿ ಮಟ್ಟದಲ್ಲಿ ಪ್ರಭಲ ಲಾಬಿ ಕೆಲಸ ಮಾಡಿದ್ದು ಆ ಹೆಸರು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಯುವರಾಜ ಯದುವೀರ್ ಅವರ ಪತ್ನಿಯ ರಾಜಸ್ಥಾನದ ಪ್ರಮುಖ ರಾಜ ಮನೆತನದ ಮಗಳು. ಡುಂಗರಪುರ ವಂಶಸ್ಥ ಹರ್ಷವರ್ಧನ್ ಸಿಂಗ್ ಅವರು ತ್ರಿಷಿಕಾ ಅವರ ತಂದೆ. ಕಳೆದ ಅವಧಿಯಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಹಾಗೆಯೆ ಪ್ರಧಾನಿ ನರೇಂದ್ರ ಮೋದಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.
ಸಧ್ಯ ಅಳಿಯ ಯುವರಾಜ ಯದುವೀರ್ ಪರ ಕೇಂದ್ರ ಮಟ್ಟದಲ್ಲಿ ಪ್ರಸ್ತಾಪಿಸಿದ್ದು ಇದೇ ಹರ್ಷವರ್ಧನ್ ಅವರು. ಈ ಹಿನ್ನಲೆಯಲ್ಲಿ ಜನಪರ ಕೆಲಸ ಮಾಡಿದ್ದರು ಪ್ರತಾಪ್ ಸಿಂಹ ಅವರ ಹೆಸರು ಕೈಬಿಡುವ ಮೂಲಕ ಬಿಜೆಪಿ ಅಚ್ಚರಿ ಹೆಜ್ಜೆ ಇಡುವ ನಿಟ್ಟಿನಲ್ಲಿ ಮೈಸೂರಿಗೆ ಹೊಸ ಅಭ್ಯರ್ಥಿ ಪರಿಚಯಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿವೆ.