ರಾಜ್ಯಪಾಲರ ಅಂಗವಸ್ತ್ರಕ್ಕೆ ಬೆಂಕಿ ; ಅದೃಷ್ಟವಶಾತ್ ಪಾರು
ತಿರುವನಂತಪುರಂ : ಕಾರ್ಯಕ್ರಮ ಒಂದರಲ್ಲಿ ದೀಪ ಬೆಳಗಿಸುವ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಅಂಗವಸ್ತ್ರಕ್ಕೆ ಬೆಂಕಿ ತಗುಲಿದ್ದ ಘಟನೆ ನಡೆದಿದೆ.
ಹೌದು ಕೇರಳದ ಪಲಕ್ಕಾಡ್ ನಲ್ಲಿ ನಡೆದ ಶಬರಿ ಆಶ್ರಮದ ಶತಾಬ್ದಿ ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸುವ ಸಂದರ್ಭದಲ್ಲಿ ರಾಜ್ಯಪಾಲರ ಅಂಗವಸ್ತ್ರಕ್ಕೆ ದೀಪ ತಗುಲಿದೆ.
ಕೂಡಲೇ ಭದ್ರತಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಅದೃಷ್ಟವಶಾತ್ ರಾಜ್ಯಪಾಲರು ಈ ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಲಕ್ಕಾಡ್ ಸಂಸದ ವಿಕೆ ಶ್ರೀಕಂದನ್ ಮತ್ತು ಕೇರಳ ಹರಿಜನ ಸೇವಕ ಸಂಘದ ಅಧ್ಯಕ್ಷ ಡಾ. ಎನ್ ಗೋಪಾಲಕೃಷ್ಣನ್ ನಾಯರ್ ಉಪಸ್ಥಿತರಿದ್ದರು.