Select Page

ಚಿಕ್ಕೋಡಿ : ಬಾವಿಗೆ ಹಾರಿ ತಾಯಿ, ಮಗ ಸಾವು

ಚಿಕ್ಕೋಡಿ : ಬಾವಿಗೆ ಹಾರಿ ತಾಯಿ, ಮಗ ಸಾವು

ಚಿಕ್ಕೋಡಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಹಾಗೂ ಆಕೆಯ ಹದಿನೇಳು ತಿಂಗಳ ಪುತ್ರನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕೋಡಿ ತಾಲೂಕಿನ ಮಾಂಗನೂರ ಗ್ರಾಮದಲ್ಲಿ ನಡೆದಿದೆ.

ಗಾಯತ್ರಿ ವಾಗಮೋರೆ (26) ಹಾಗೂ 17 ತಿಂಗಳ ಮಗು ಕುಶಲ ವಾಗಮೋರೆ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು ಮಹಿಳೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಘಟನೆಗೆ ನಿಖರ ಮಾಹಿತಿ ಹೊರಬರಬೇಕು.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿನೀಡಿ ಬಾವಿಯಿಂದ ಶವ ಹೊರತಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಶವಗಳ ರವಾನೆ ಮಾಡಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!