
ಬೈಲಹೊಂಗಲದಲ್ಲಿ ಭೀಕರ ಅಪಘಾತ ; ವ್ಯಕ್ತಿ ಸಾವು

ಬೈಲಹೊಂಗಲ: ದ್ವಿಚಕ್ರ ವಾಹನಕ್ಕೆ ಕಾರು ಹಿಂಬಂದಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದ ಬಿಸ್ಕಟ್ ಕಾರ್ಖಾನೆ ಹತ್ತಿರ ಶನಿವಾರ ನಡೆದಿದೆ.
ದೇವಲಾಪೂರ ಗ್ರಾಮದ ಮುಗುಟಸಾಬ ಮೋದಿನಸಾಬ ಅಲ್ಲಾಬಾಯಿ (53) ಮೃತ ದುರ್ದೈವಿ. ದ್ವಿಚಕ್ರ ವಾಹನ ಸವಾರ ಮೈನುದ್ದೀನ ಮುಗುಟಸಾಬ ಅಲ್ಲಾಬಾಯಿ (36) ಗಂಭೀರವಾಗಿ ಗಾಯಗೊಂಡು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಂದೆ, ಮಗ ದೇವಲಾಪೂರ ಗ್ರಾಮದಿಂದ ಸಂಪಗಾಂವ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಆರ್.ಎಂ.ಸಂಕನಾಳ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾರ ಚಾಲಕ ಪರಾರಿಯಾಗಿದ್ದಾನೆ.