ಬೆಂಗಳೂರು : ವ್ಯಕ್ತಿ ಓರ್ವನಿಗೆ 15 ಲಕ್ಷ ರೂ ಹಣ ನೀಡುವಂತೆ ಬೆದರಿಸುತ್ತಿದ್ದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.‌

ನಿರ್ಮಾಣ ಹಂತದ ಕಟ್ಟಡ ಮಾಲಿಕನಿಗೆ 15 ಲಕ್ಷ ಬೇಡಿಕೆಗೆ ಇಟ್ಟಿದ್ದ ಬಿಜೆಪಿ ಮುಖಂಡನ ವಿರುದ್ಧ ರಾಜಸ್ಥಾನ ಮೂಲದ ಚೌದರಿ ಎಂಬುವವರು ದೂರು ದಾಖಲಿಸಿದ್ದರು. ಸಧ್ಯ ಮಾಜಿ ರೌಡಿಶೀಟರ್ ಆನಂದ್ ಬಂಧಿತ ಆರೋಪಿ.

ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರೋಪಿ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.