ನಿರುದ್ಯೋಗದಿಂದ ಬೇಸತ್ತು ಚಾಕು ಇರಿದು ಜೈಲಿಗೆ ಹೋದ ಯುವಕ
ಬೆಂಗಳೂರು : ಎಷ್ಟು ಹುಡುಕಿದರು ಕೆಲಸ ಸಿಗದ ಹಿನ್ನಲೆಯಲ್ಲಿ ಬೇಸತ್ತು ಯುವಕನೋರ್ವ ಬಿಎಂಟಿಸಿ ನಿರ್ವಾಹಕನಿಗೆ ಚಾಕು ಇರಿದು ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಪ್ಟೆಂಬರ್ 1 ರಂದು ವಾಟ್ ಫೀಲ್ಡ್ ಬಳಿ ವೋಲ್ಟೋ ಬಸ್ ಕಂಡಕ್ಟರ್ ಯೊಗೇಶ್ ಎಂಬುವವರಿಗೆ ಯುವಕನೋರ್ವ ಎರಡು ಬಾರಿ ಚಾಕು ಇರಿದು ಕೃತ್ಯ ಎಸಗಿದ್ದಾನೆ.
ಡಿಪೋ ನಂ 13 ರ ವೋಲ್ಟೋ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಬಸ್ ನಲ್ಲಿ ಸಂಚರಿಸುತ್ತಿದ್ದ ಯುವಕ ಹುಚ್ಚನಂತೆ ವರ್ತನೆ ಮಾಡಿದ್ದಾನೆ. ಕಂಡಕ್ಟರ್ ಗೆ ಚಾಕುವಿನಿಂದ ಇರಿದ್ದಲ್ಲದೆ. ಕೈಯಲ್ಲಿದ್ದ ಸುತ್ತಿಗೆಯಿಂದ ಬಸ್ ಗಾಜು ಪುಡಿ ಮಾಡಿದ್ದಾನೆ.
ಆರೋಪಿಯನ್ನು ವೈಟ್ ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಎಲ್ಲಿಯೂ ಕೆಲಸ ಸಿಗದ ಹಿನ್ನಲೆಯಲ್ಲಿ ಜೈಲಿನಲ್ಲಿ ಇರುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದೇನೆ ಎಂದು ಯುವಕ ಹೇಳಿಕೊಂಡಿದ್ದಾನೆ.
ಗಂಭೀರವಾಗಿ ಗಾಯಗೊಂಡ ಬಸ್ ನಿರ್ವಾಹಕನನ್ನು ನಗರದ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.