
ಬೆಳಗಾವಿಯಲ್ಲಿ ನೂರರ ಗಡಿ ದಾಟಿದ ಟೊಮ್ಯಾಟೊ ಬೆಲೆ

ಬೆಳಗಾವಿ : ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನರಿಗೆ ಸಧ್ಯ ಟೊಮ್ಯಾಟೊ ಬೆಲೆ ನಿದ್ದೆಗೆಡಿಸಿದೆ. ಬೆಳಗಾವಿ ನಗರದಲ್ಲಿ ಸಧ್ಯ ಒಂದು ಕೆಜಿ ಟೊಮ್ಯಾಟೊ ಗೆ ಬರೋಬ್ಬರಿ ನೂರು ರೂಪಾಯಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಐತಿಹಾಸಿಕ ತಾಪಮಾನ ಹಾಗೂ ಸಧ್ಯ ಮಳೆರಾಯನ ಅವಾಂತರದಿಂದ ಟೊಮೆಟೊ ಬೆಳೆ ನೆಲಕಚ್ಚಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಅಭಾವ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಬೆಲೆ ಶತಕದ ಗಡಿ ದಾಟಿದ್ದು ಜನರಿಗೆ ಕೊಂಚ ತೊಂದರೆಯಾಗಿದೆ.
ಆದರೆ ಈ ಬಾರಿ ಟೊಮ್ಯಾಟೊ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವ ಹಿನ್ನಲೆಯಲ್ಲಿ ಲಾಭದ ನಿರೀಕ್ಷೆಯಲ್ಲಿ ರೈತನಿದ್ದಾನೆ. ಆದರೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ.