
ಹಾಲಿ, ಮಾಜಿ ಸಿಎಂಗಳಿಗೆ ನಾಳೆ ಮಹತ್ವದ ದಿನ….!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಾಳೆ ಮಹತ್ವದ ದಿನ ಆಗಲಿದೆ. ಇಬ್ಬರ ಪ್ರತ್ಯೇಕ ಪ್ರಕರಣಗಳ ಕುರಿತು ನಾಳೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಲಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಯನ್ನು ಸಿಬಿಐ ಗೆ ಹಸ್ತಾಂತರ ಮಾಡುವಂತೆ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಮೇಲ್ಮನವಿ ಕುರಿತು ನಾಳೆ ಧಾರವಾಡ ಹೈಕೋರ್ಟ್ ಪೀಠ ಆದೇಶ ಹೊರಡಿಸಲಿದೆ.
ಈಗಾಗಲೇ ಅರ್ಜಿದಾರ ಹಾಗೂ ಸಿದ್ದರಾಮಯ್ಯ ಪರ ವಾದ ಆಲಿಸಿರುವ ಪೀಠ ನಾಳೆ ಶುಕ್ರವಾರ ಆದೇಶ ಹೊರಡಿಸಲಿದೆ. ಒಂದು ವೇಳೆ ಪ್ರಕರಣ ಸಿಬಿಐ ಸಂಬಳಕ್ಕೆ ಹೋದರೆ ರಾಜ್ಯದಲ್ಲಿ ಮತ್ತೆ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುದರಲ್ಲಿ ಸಂಶಯವಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸುವ ಕುರಿತು ಕೋರ್ಟ್ ನಾಳೆ ಮಹತ್ವದ ಆದೇಶ ಹೊರಡಿಸಲಿದೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರಿಗೂ ನಾಳೆ ಮಹತ್ವದ ದಿನವಾಗಲಿದೆ.