
ದೆಹಲಿಯಲ್ಲಿ ಬೊಮ್ಮಾಯಿ, ಸಂತೋಷ್ ಭೇಟಿಯಾದ ಯತ್ನಾಳ್ ತಂಡ ; ಶೀಘ್ರದಲ್ಲೇ ಶುಭಸುದ್ದಿ ಎಂದ ನಾಯಕರು..!

ದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದ ಯತ್ನಾಳ್ ಬಣದ ಸದಸ್ಯರು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ನಾಯಕರನ್ನು ಭೇಟಿಯಾಗಿದ್ದು, ಮಹತ್ವದ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ.
ಹೌದು ದೆಹಲಿಗೆ ತೆರಳಿರುವ ಯತ್ನಾಳ್ ಬಣದ ಸದಸ್ಯ ಕುಮಾರ್ ಬಂಗಾರಪ್ಪ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನೂ ಯತ್ನಾಳ್ ಸೇರಿದಂತೆ ಬಂಡಾಯ ನಾಯಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಬಿಜೆಪಿ ವರಿಷ್ಠ ನಾಯಕರಾದ ಅಮಿತ್ ಶಾ, ಜೆ.ಪಿ ನಡ್ಡಾ ಅವರು ಯತ್ನಾಳ್ ಟೀಂ ಭೇಟಿಗೆ ಅವಕಾಶ ನೀಡಿಲ್ಲ ಎಂದು ವರದಿಯಾಗುದ್ದು, ಸಂತೋಷ್ ಹಾಗೂ ಬಸವರಾಜ ಬೊಮ್ಮಾಯಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಜಿ.ಎಮ್ ಸಿದ್ದೇಶ್ವರ ಅವರು. ಶೀಘ್ರದಲ್ಲೇ ರಾಜ್ಯಕ್ಕೆ ಶುಭ ಸುದ್ದಿ ಸಿಗುತ್ತದೆ ಎಲ್ಲರೂ ಕಾಯಿರಿ ಎಂದು ಹೇಳಿದ್ದಾರೆ.