
ಬೆಳಗಾವಿ ಐಪಿಎಸ್ ಅಧಿಕಾರಿ ಜಮೀನಿನಲ್ಲಿ ಮರಳು ಸಂಗ್ರಹ ; ಗೃಹ ಸಚಿವರಿಗೆ ದೂರು ಕೊಟ್ಟರು ಕ್ರಮವಿಲ್ಲ…?

ಬೆಳಗಾವಿ : ಅಕ್ರಮ ಚಟುವಟಿಕೆ ತಡೆಗಟ್ಟಬೇಕಿದ್ದ ಅಧಿಕಾರಿಗಳ ಮೇಲೆ ಗುರುತರವಾದ ಆರೋಪ ಕೇಳಿಬಂದರು ಕೆಲವೊಮ್ಮೆ ಯಾವುದೇ ಕ್ರಮ ಆಗಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಬೆಳಗಾವಿಯ ಐಪಿಎಸ್ ಅಧಿಕಾರಿ ಜಮೀನಿನಲ್ಲಿ ಅಕ್ರಮ ಮರಳು ಸಂಗ್ರಹ ಕುರಿತು ಖುದ್ದು ಗೃಹ ಸಚಿವರಿಗೆ ದೂರು ನೀಡಲಾಗಿದೆ.
ಹೌದು ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ರವೀಂದ್ರ ಕೆ. ಗಡಾದಿ ವಿರುದ್ಧ ಅಕ್ರಮ ಮರಳು ಸಂಗ್ರಹ ಕುರಿತು ಗೃಹ ಸಚಿವರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದಾಖಲೆ ಸಹಿತ ದೂರು ಕೊಡಲಾಗಿದೆ.
ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಸುಮಾರು 1.30 ಎಕರೆ ಜಮೀನಿನಲ್ಲಿ ಅಕ್ರಮ ಮರಳು ಸಂಗ್ರಹ ಮಾಡಲಾಗಿದೆ. ಜನಸಾಮಾನ್ಯರ ಜಮೀನಿನಲ್ಲಿ ಮರಳು ಕಂಡರೆ ಪ್ರಕರಣ ದಾಖಲಿಸುವ ಅಧಿಕಾರಿಗಳು ಐಪಿಎಸ್ ಅಧಿಕಾರಿ ಎಂಬ ಕಾರಣಕ್ಕೆ ಈವರೆಗೂ ಅವರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವೇ ಸರಿ.
ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು ಮರಳು ವಶಕ್ಕೆ ಪಡೆಯದೆ ಬಿಟ್ಟಿದ್ದಾರೆ. ಅಧಿಕಾರಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬ ಆರೋಪ ದಾಖಲಿಸಲಾಗಿದೆ.
ಇನ್ನೂ ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪ ಅಧಿಕಾರಿ ವಿರುದ್ಧ ಕೇಳಿಬಂದರು ಆ ಪ್ರಕರಣವೂ ಯಶಸ್ವಿಯಾಗಿ ಹಳ್ಳ ಹಿಡಿಸಿದ ಕೀರ್ತಿ ಬೆಳಗಾವಿ ಜಿಲ್ಲೆಯ ಆಧಿಕಾರಿಗಳಿಗೆ ಸಲ್ಲಬೇಕು.