ಜೈಲಿನಿಂದ ಹೊರಬಂದ ಭ್ರೂಣಹತ್ಯೆ ಆರೋಪಿಗೆ ಹೂಮಳೆ ಸ್ವಾಗತ ; ವೀರರ ನಾಡಿನಲ್ಲಿ ಇದೆಂತ ವಿಕೃತಿ..? – VIDEO
ಬೆಳಗಾವಿ : ಹಣದ ಆಸೆಗಾಗಿ ಭ್ರೂಣಹತ್ಯೆ ಹಾಗೂ ಶಿಶು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಕಿತ್ತೂರಿನ ನಕಲಿ ವೈದ್ಯನೆ ಊರಿನ ಜನ ಹೂ ಮಳೆ ಸ್ವಾಗತ ಕೋರಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈಧ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪಿ ಅಬ್ದುಲ್ ಲಾಡಖಾನ್ ಎಂಬಾತ ಭ್ರೂಣಹತ್ಯೆ ನಡೆಸುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತಿಗಡೊಳ್ಳಿ ಗ್ರಾಮದ ತೋಟದ ಮನೆ ಆವರಣದಲ್ಲಿ ಹೂತಿದ್ದ ಮೂರು ಭ್ರೂಣಗಳ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಸಧ್ಯ ಈ ನಕಲಿ ವೈದ್ಯ ಜೈಲಿನಿಂದ ಹೊರಬಂದಿದ್ದು ಆತನಿಗೆ ಸ್ನೇಹಿತರು ಹೂ ಚೆಲ್ಲಿ ಸ್ವಾಗತ ಕೋರಿದ್ದಾರೆ. ಹಣಕ್ಕಾಗಿ ಬಡ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರಿಂದ ಶಿಶುಗಳನ್ನು ಪಡೆದುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗೆ ಜನ ಅದ್ಧೂರಿ ಸ್ವಾಗತ ನೀಡಿದ್ದು, ಇದರಿಂದ ನಾಗರಿಕ ಸಮಾಜ ತಕೆತಗ್ಗಿಸುವಂತಾಗಿದೆ.
ಏನಿದು ಪ್ರಕರಣ……?
ನಕಲಿ ವೈದ್ಯನೋರ್ವ ಹಣದ ಆಸೆಯಿಂದ ಭ್ರೂಣಹತ್ಯೆ ಹಾಗೂ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ನಕಲಿ ವೈದ್ಯನ ತೋಟದಲ್ಲಿ ಮೂರು ಭ್ರೂಣಗಳ ಅವಶೇಷ ಪತ್ತೆಯಾದ ಘಟನೆ ಕಿತ್ತೂರು ತಾಲೂಕಿನಲ್ಲಿ ನಡೆದಿತ್ತು.
ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ್ ಕೋಣಿ, ಎಸಿ ಪ್ರಭಾವತಿ ಪಕೀರಪುರ ಹಾಗೂ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ ಒಳಗೊಂಡ ಅಧಿಕಾರಿಗಳ ತಂಡ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಬಳಿ
ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಪ್ಪಸಗೌಡರ್
ವಿಚಾರಣೆ ವೇಳೆ ಭ್ರೂಣ ಹೂತಿಟ್ಟಿದ್ದರ ಕುರಿತು ಮಾಹಿತಿ ನೀಡಿದ್ದ. ಇತನ ಮಾಹಿತಿ ಮೆರೆಗೆ ಸ್ಥಳ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದ್ದು, ನವಜಾತ ಶಿಶು ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು.
ಭ್ರೂಣಹತ್ಯೆ ಹಾಗೂ ಮಕ್ಕಳ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದರು
ಮಹಿಳೆಯಿಂದ ಕರಾಳ ಪ್ರಕರಣ ಬೆಳಕಿಗೆ
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಕ್ಕಳ ರಕ್ಷಣಾ ಘಟಕದ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆಯಿಂದ ಇಡೀ ಪ್ರಕರಣದ ಜಾಲವೇ ಪೊಲೀಸರ ಗಮನಕ್ಕೆ ಬಂದಿತ್ತು. ಕಿತ್ತೂರಿನ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಬಳಿ 60 ಸಾವಿರಕ್ಕೆ ಮಹಾದೇವ ಎಂಬ ಮಹಿಳೆ ಶಿಶುವನ್ನು ಪಡೆದಿದ್ದ ಮಹಿಳೆ ಸುಮಾರು 1.40 ಲಕ್ಷ ರೂ. ಗೆ ಮಾರಾಟ ಮಾಡಲು ಯತ್ನಿಸಿದ್ದಳು. ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಪ್ರಕರಣದ ಕುರಿತು ಕರಾಳ ಮುಖ ಬಯಲಾಗಿತ್ತು.
ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಆಸ್ಪತ್ರೆ ಇಟ್ಟುಕೊಂಡು ಗರ್ಭಿಣಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳನ್ನು ತಿರಸ್ಕಾರ ಮಾಡಿದವರಿಂದ ನವಜಾತ ಶಿಶು ಪಡೆದುಕೊಂಡು ಅವುಗಳಿಗೆ ಆರೈಕೆ ಮಾಡಿ ಮಾರಾಟ ಮಾಡುತ್ತಿದ್ದ. ಒಂದುವೇಳೆ ನವಜಾತ ಶಿಶು ಮೃತಪಟ್ಟರೆ ಅವುಗಳನ್ನು ತನ್ನ ಸ್ವಂತ ತೋಟದ ಮನೆ ಹಿಂದಿನ ಜಾಗದಲ್ಲಿ ಹೂಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
20 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್
ಕಳೆದ 20 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ರಿಯಾಜ್ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಸರ್ಕಾರದಿಂದ ಯಾವುದೇ ಪ್ರಮಾಣಪತ್ರ ಪಡೆದಿರಲಿಲ್ಲ. ರಾಜಾರೋಷವಾಗಿ ಶಿಶು ಕಳ್ಳ ಸಾಗಾಣಿಕೆ ಹಾಗೂ ಭ್ರೂಣ ಹತ್ಯೆ ನಡೆಸುತ್ತಿದ್ದರು ತಾಲೂಕು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ.
ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಪತ್ನಿ ಬಿ.ಹೆಚ್.ಎಮ್.ಎಸ್ ಪದವಿ ಪಡೆದುಕೊಂಡಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದ್ದು. ಆರೋಪಿ ವೈದ್ಯ ಲಾಡಖಾನ್ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ತನ್ನ ಕೃತ್ಯ ಎಸಗುತ್ತಿದ್ದನಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಕೋವಿಡ್ ಸಂದರ್ಭದಲ್ಲಿ ನಕಲಿ ವೈದ್ಯನ ಜೊತೆ ಟಿಹೆಚ್ಓ ಕಾರ್ಯ
ಭ್ರೂಣಹತ್ಯೆ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣದ ನಡೆಯುತ್ತಿದ್ದರು ಕಿತ್ತೂರು ತಾಲೂಕು ವೈದ್ಯಾಧಿಕಾರಿ
ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿ ನಕಲಿ ವೈದ್ಯ
ಅಬ್ದುಲ್ ಲಾಡಖಾನ್ ಜೊತೆಗೆ ಸೇರಿಸಿಕೊಂಡು ತಾಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಕೆಲಸ ಮಾಡುತ್ತಿದ್ದ.
ಕಳೆದ ಇಪ್ಪತ್ತು ವರ್ಷಗಳಿಂದ ಸರ್ಕಾರದ ಪ್ರಮಾಣಪತ್ರ ಇಲ್ಲದೇ ನಕಲಿ ವೈದ್ಯನಾಗಿ ಕಿತ್ತೂರು ಪಟ್ಟಣದಲ್ಲಿ ಆಸ್ಪತ್ರೆ ನಡೆಸುತ್ತಿದ್ದರು ಸ್ಥಳೀಯ ವೈದ್ಯಾಧಿಕಾರಿಗಳ ಗಮನಕ್ಕೆ ಏಕೆ ಬರಲಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.