Select Page

ಸವದತ್ತಿ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್ ; ಏನಂದ್ರು ಸಚಿವರು….!

ಸವದತ್ತಿ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್ ; ಏನಂದ್ರು ಸಚಿವರು….!

ಬೆಳಗಾವಿ : ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತ ವತಿಯಿಂದ ಜನಸಂದಣಿ ನಿರ್ವಹಣೆ, ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿ ಕಾಮಗಾರಿ ಆರಂಭ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಯಲ್ಲಮ್ಮ ಗುಡ್ಡದಲ್ಲಿ ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಪವಿತ್ರ ಗುಡ್ಡದ ಅಭಿವೃದ್ಧಿಗೆ ಟಿಟಿಡಿ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗುವುದು ಎಂದರು.

ಬೆಳಗಾವಿಯಲ್ಲಿ ಡಿ.26 ಹಾಗೂ ಜ.21 ಗಾಂಧಿ ಭಾರತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕೇಂದ್ರದಿಂದ ನೂರು ಕೋಟಿ ಮಂಜೂರಾಗಿದೆ. ಇದು ಮಾತ್ರವಲ್ಲದೇ 20 ಕೋಟಿ ಪ್ರಸಾದ ಯೋಜನೆಯಡಿ ಮಂಜೂರಾಗಿದೆ. ಇದಲ್ಲದೇ ರಾಜ್ಯ ಸರಕಾರದಿಂದ ಕೂಡ ಸಾಕಷ್ಟು ಅನುದಾನ ನೀಡಲಾಗುತ್ತಿದೆ.

ವಸತಿ ಗೃಹ, ದಾಸೋಹ ಭವನ, ಮೂಲಸೌಕರ್ಯಗಳನ್ನು ಒಳಗೊಂಡ ಮಾಸ್ಟರ್ ಪ್ಲ್ಯಾನ್ ಬಹುತೇಕ ಸಿದ್ಧಗೊಂಡಿದೆ. ವೆಬ್ ಸೈಟ್ ನಲ್ಲೂ ಪ್ಲ್ಯಾನ್ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು.‌ ದಾಸೋಹ ಭವನ ನಿರ್ಮಾಣದ ನಂತರ ದಾಸೋಹ ಆರಂಭಿಸಲಾಗುವುದು.

ಸವದತ್ತಿ ಗುಡ್ಡದಲ್ಲಿ ಬಯಲು ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಅಕ್ಟೋಬರ್ 2 ರವರೆಗೆ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ 28 ಬಗೆಯ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗುವುದು.

ಗೋಕಾಕ ಫಾಲ್ಸ್ ರೋಪ್ ಕಾರ್ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಭೀಮಗಡ ಪ್ರದೇಶದಲ್ಲಿ 18 ಕಿ.ಮೀ. ಸಫಾರಿಗಾಗಿ ಮುಕ್ತಗೊಳಿಸಲಾಗುತ್ತಿದೆ. ಅದು ಆರಂಭಗೊಂಡ ಬಳಿಕ ಭೀಮಗಡ ಅತ್ಯಾಕರ್ಷಕ ಪ್ರವಾಸಿತಾ ಆಗಲಿದೆ.
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತ ಮಾಹಿತಿ ಪುಸ್ತಕವನ್ನು ಸಚಿವ ಎಚ್.ಕೆ.ಪಾಟೀಲ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಗೀತಾ ಕೌಲಗಿ, ಸೌಮ್ಯಾ ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!