
ಅಂಬಾನಿ ಮಗನ ಮದುವೆ ಸಂಭ್ರದಮದಲ್ಲಿ ಡಿಕೆಶಿ ಕುಟುಂಬ ;ಸುಂದರ ಉಡುಪಿನಲ್ಲಿ ಕಂಗೊಳಿಸಿದ ಐಶ್ವರ್ಯ

ಮುಂಬೈ : ದೇಶದಲ್ಲೇ ಅತ್ಯಂತ ದುಬಾರಿ ಮದುವೆ ಎಂದು ಹೆಸರಾದ ರಿಲಯನ್ಸ್ ಮುಖ್ಯಸ್ಥ ಅಂಬಾನಿ ಪುತ್ರ ಅನಂತ್ ಹಾಗೂ ರಾಧಿಕಾ ಮದುವೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ತಮ್ಮ ಕುಟುಂಬ ಸಮೇತ ಭಾಗವಹಿಸಿದ್ದರು.
ಈ ಕುರಿತು ಡಿ.ಕೆ ಶಿವಕುಮಾರ ಪುತ್ರಿ ಐಶ್ವರ್ಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರ ಉಡುಪಿನಲ್ಲಿ ಡಿಕೆಶಿ ಕುಟುಂಬ ಕಂಗೊಳಿಸುತ್ತಿದ್ದಿದ್ದು ವಿಶೇಷವಾಗಿತ್ತು.
ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಹಾಗೂ ಪುತ್ರಿ ಐಶ್ವರ್ಯಾ, ಅಳಿಯ ಅರ್ಮಾತ್ಯ ಹೆಗ್ಡೆ ಜೊತೆಗೆ ವಿವಾಹದಲ್ಲಿ ಭಾಗಿಯಾಗಿದ್ದರು. ಐಷಾರಾಮಿ ಮದುವೆಯ ವೈಭವೋಪೇತ ಸಮಾರಂಭದಲ್ಲಿ ಪಾಲ್ಗೊಂಡ ಡಿಸಿಎಂ ಡಿಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಜೊತೆ ಪೋಟೋ ತೆಗೆಸಿಕೊಂಡು ಎಂಜಾಯ್ ಮಾಡಿದ್ದಾರೆ.
ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಕರ್ನಾಟಕದಿಂದ ರಾಕಿಂಗ್ ಸ್ಟಾರ್ ಯಶ್, ಡಿಕೆಶಿ ಕುಟುಂಬ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಭಾಗವಹಿಸಿದ್ದರು. ಜ್ವರ ಇದ್ದ ಹಿನ್ನಲೆಯಲ್ಲಿ ಖ್ಯಾತ ನಟ ಸುದೀಪ್ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಅಂಬಾನಿ ಮಗನ ಮದುವೆ ಸಮಾರಂಭ ; ಅತಿಥಿಗಳಿಗೆ ಕೊಟ್ಟ ಉಡುಗೊರೆ ಮೌಲ್ಯ ಎಷ್ಟು ಗೊತ್ತಾ…?

ಮುಂಬೈ : ದೇಶದ ಅತ್ಯಂತ ದುಬಾರಿ ಮದುವೇ ಎಂದೇ ಹೆಗ್ಗಳಿಕೆ ಪಡೆದ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಮಾರಂಭ ಕಳೆದ ಆರು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಜರುಗಿದ್ದು ಸಧ್ಯ ಮುಕ್ತಾಯದ ಹಂತ ತಲುಪಿದೆ.
ಅಂಬಾನಿ ಮಗನ ಮದುವೆಗೆ ವಿಶ್ವದ ಹಲವು ಗಣ್ಯರು ಸೇರಿದಂತೆ ಭಾರತದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಡಿದು ಕ್ರೀಡಾಪಟುಗಳು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.
ಮುಂಬೈನ ಪ್ರತಿಷ್ಠಿತ ಜಿಯೋ ವರ್ಲ್ಡ್ ನಲ್ಲಿ ನಡೆಯುತ್ತಿರುವ ಅದ್ಧೂರಿ ಮದುವೆ ಸಮಾರಂಭಕ್ಕೆ ಬಂದಿರುವ ಗಣ್ಯರಿಗೆ ಕೋಟಿ ಬೆಲೆ ಬಾಳುವ ಗಿಫ್ಟ್ ನೀಡಲಾಗುತ್ತಿದೆ. ಅನಂತ ಮದುವೆ ಸಮಾರಂಭಕ್ಕೆ ಬಂದ ಗಣ್ಯರಿಗೆ ಕೊಟ್ಟ ಉಡುಗೊರೆ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಅಂಬಾನಿ ಮಗನ ಮದುವೆಗೆ ಬಂದ ಗಣ್ಯರಿಗೆ ಸುಮಾರು 2 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಲಾಗುತ್ತಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಕೈ ಗಡಿಯಾರ ಅತಿಥಿಗಳಿಗೆ ನೀಡಲಾಗುತ್ತಿದೆ. ದೇಶದ ಶ್ರೀಮಂತ ವ್ಯಕ್ತಿಯ ಮಗನ ಮದುವೆ ಸಮಾರಂಭ ಸಧ್ಯ ವಿಶ್ವದ ಗಮನ ಸೆಳೆದಿದ್ದು ವಿಶೇಷ.