Select Page

ಕೋಳಿಗೂ ಅರ್ಧ ಟಿಕೆಟ್ ಕೊಟ್ಟ ಬಸ್ ಕಂಡಕ್ಟರ್ : ಜಾಲತಾಣದಲ್ಲಿ ಟ್ರೋಲ್

ಕೋಳಿಗೂ ಅರ್ಧ ಟಿಕೆಟ್ ಕೊಟ್ಟ ಬಸ್ ಕಂಡಕ್ಟರ್ : ಜಾಲತಾಣದಲ್ಲಿ ಟ್ರೋಲ್

ಚಿಕ್ಕಬಳ್ಳಾಪುರ : ಸಾಮಾನ್ಯವಾಗಿ ಬಸ್ ನಲ್ಲಿ ಸಂಚರಿಸುವಾಗ ಲಗೇಜ್ ಸೇರಿದಂತೆ ವಸ್ತುಗಳಿಗೆ ಟಿಕೆಟ್ ಕೊಡುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಕಂಡಕ್ಟರ್ ಪ್ರಯಾಣಿಕನ ಜೊತೆ ಇದ್ದ ಕೋಳಿಗೂ ಟಿಕೆಟ್ ನೀಡಿದ್ದು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಚಿಕ್ಕಬಳ್ಳಾಪುರದ ಪೆರೇಸಂದ್ರದಿಂದ ಸೋಮೇಶ್ವರಕ್ಕೆ ತೆರಳುವ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ವ್ಯಕ್ತಿಯೊಬ್ಬ
ಕೋಳಿ ತೆಗೆದುಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ( ಕೆ ಎಸ್ ಆರ್ ಟಿ ಸಿ ) ಬಸ್ ಕಂಡಕ್ಟರ್ ವ್ಯಕ್ತಿಯ ಜೊತೆಗಿದ್ದ ಕೋಳಿಗೂ ಐದು ರೂ. ಟಿಕೆಟ್ ನೀಡಿದ್ದು ಈ ಪೋಟೋ ಸಧ್ಯ ವೈರಲ್ ಆಗಿದೆ.

ಶ್ರಾವಣಮಾಸ ಮುಗಿದ ಹಿನ್ನಲೆಯಲ್ಲಿ ನಾಟಿ ಕೋಳಿ ಹಿಡಿದು ಮನೆಗೆ ತರಳುತ್ತಿದ್ದ ವ್ಯಕ್ತಿಯ ಕೋಳಿಗೆ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ. ಅವನಿಗೆ ಹತ್ತು ರೂ ಕೊಟ್ಟರೆ ಕೋಳಿಗೆ ಐದು ರೂ ಟಿಕೆಟ್ ನೀಡಿದ್ದಾನೆ. ಈ ವಿಚಾರ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!