
ವಾರ್ಡ್ ನಂ 46 ರ ಬಿಜೆಪಿ ಅಭ್ಯರ್ಥಿ ಹನುಮಂತ ಕೊಂಗಾಲಿಗೆ ಶ್ರೀಗಳ ರಕ್ಷೆ

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ವಾರ್ಡ ನಂ 46 ರ ಬಿಜೆಪಿ ಅಭ್ಯರ್ಥಿಯಾಗಿರುವ ಹನುಮಂತ ಕೊಂಗಾಲಿಗೆ ಕಾರಂಜಿಮಠದ ಗುರುಸಿದ್ಧ ಶ್ರೀಗಳು ಆಶಿರ್ವಾದ ನೀಡಿದರು.
ಬುಧವಾರ ರಾಮತಿರ್ಥ ನಗರದ ಬಿಜೆಪಿ ಆಫೀಸಿಗೆ ಆಗಮಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಬಿಜೆಪಿ ಅಭ್ಯರ್ಥಿ ಹನುಮಂತ ಕೊಂಗಾಲಿ ಅವರಿಗೆ ಆಶಿರ್ವದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾಹಾಂತೇಶ್ ವಕ್ಕುಂದ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.