ಅಥಣಿ : ಬಸ್ಸಿಗಾಗಿ ಕಾಯ್ದು ಕುಳಿತ ಯುವಕನನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಕಾಮುಕ
ಅಥಣಿ : ಬಸ್ ಗಾಗಿ ಕಾಯ್ದು ಕುಳಿತ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಯುವಕನ ಮೇಲೆ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿಯ ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವ ಯುವಕನ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅತ್ಯಾಚಾರ ಎಸಗಿದ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ರಾಜು ಆಚಾರಟ್ಟಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟೆಲ್ ಕೆಲಸ ಮುಗಿಸಿ ಮನೆಗೆ ತೆರಳಲು ಬಸ್ಸಿಗಾಗಿ ಯುವಕ ಕಾಯುತ್ತಿದ್ದ. ವೇಳೆ ಬೈಕ್ ಮೇಲೆ ಬಂದ ಆರೋಪಿ ಮನೆಗೆ ಬಿಡುವುದಾಗಿ ಹೇಳಿ ಬೈಕ್ ಮೇಲೆ ಕರೆದೊಯ್ದು ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ಯಾರಿಗೂ ಹೇಳಬಾರದೆಂದು ಜೀವ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ಯುವಕ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಆರೋಪಿ ರಾಜು ಆಚಾರಟ್ಟಿಯನ್ನು ಬಂಧಿಸಿದ್ದಾರೆ.