
VIDEO : ಬಿಜೆಪಿ ಸಚಿವರ ವಿರುದ್ಧ ಸ್ವಪಕ್ಷ ನಾಯಕರೇ ಕಿಡಿ

ಉತ್ತರ ಪ್ರದೇಶ : ಲಖಿಂಪುರ್ ಹತ್ಯಾಕಾಂಡದ ವಿರುದ್ಧ ಬಿಜೆಪಿ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಮತ್ತೊಬ್ಬ ಹಿರಿಯ ನಾಯಕ ಕಿಡಿ ಕಾರಿದ್ದಾರೆ.
https://twitter.com/ANINewsUP/status/1447228626940805120?t=0CHQ7SGIk3X2nus5gSDMfg&s=19
ರಾಜಕೀಯ ನಾಯಕರೆಂದರೆ ತಮ್ಮ ಕಾರಿನಿಂದ ಮತ್ತೊಬ್ಬರ ಮೇಲೆ ಹರಿಸುವುದಲ್ಲ. ನಾಯಕನಾದವನು ಜನರಿಗಾಗಿ ಮಿಡಿಯಬೇಕು. ಜನನಾಯಕನಾದವನು ಲೂಟಿ ಮಾಡಬೇಕಾದ ನಿಯಮವೇನಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಲಕ್ನೋನಲ್ಲಿ ನಡೆದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯಕಾರಣಿ ಉದ್ಘಾಟನಾ ಸಭೆಯಲ್ಲಿ ಮಾತನಾಡಿರುವ ಇವರು. ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿರುವುದನ್ನು ವಿರೋಧಿಸಿದ್ದಾರೆ. ಈ ಬೆಳವಣಿಗೆಯಿಂದ ಬಿಜೆಪಿ ವಲಯದಲ್ಲಿ ಬಾರಿ ಚರ್ಚೆಗಳಾಗುತ್ತಿವೆ.