Select Page

Advertisement

ಬುಡಾ ಅಧ್ಯಕ್ಷರಿಗೆ ಬಿಜೆಪಿ ಶಾಸಕರ ಅಸಹಕಾರ : ಜನರಿಗೆ ಸ್ಪಷ್ಟನೆ ನೀಡಲಿ : ಶಾಸಕ ಸತೀಶ್

ಬುಡಾ ಅಧ್ಯಕ್ಷರಿಗೆ ಬಿಜೆಪಿ ಶಾಸಕರ ಅಸಹಕಾರ : ಜನರಿಗೆ ಸ್ಪಷ್ಟನೆ ನೀಡಲಿ : ಶಾಸಕ ಸತೀಶ್

ಬೆಳಗಾವಿ : ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಮುಂದೆ ಹಾಕುತ್ತುರುವುದು ಬಿಜೆಪಿಯ ಇಬ್ಬರು ಶಾಸಕರು ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ ಇದರ ಬಗ್ಗೆ ಶಾಸಕರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಪ್ರಾಧಿಕಾರದ  ನಾಮನಿರ್ದೇಶಿತ ಸದಸ್ಯರನ್ನು ಬಿಜೆಪಿ‌ ಶಾಸಕರು ಸಭೆಗೆ ಹೋಗಲು ಬಿಡುತ್ತಿಲ್ಲ. ಬುಡಾದಲ್ಲಿ ನಾವು ಮಂಜೂರು ಮಾಡಿದ ಕೆಲಸಗಳು ಇನ್ನೂ ಪೆಂಡಿಗ್ ಇವೆ. ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆ ಪರಿಹಾರವನ್ನು ಶಾಸಕರೇ ಬಿಜೆಪಿ ಶಾಸಕರೇ ಕಂಡುಕೊಳ್ಳಬೇಕು‌ ಎಂದರು.

ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.
ಅನುದಾನ, ಸಹಾಯಧನ, ಪ್ರೋತ್ಸಾಹ ಧನ ಕಟ್ ಆಗಿದೆ‌ ಬೆಳಗಾವಿ ಉತ್ತರ, ದಕ್ಷಿಣದಲ್ಲಿ ಓಡಾಟ ವಿಚಾರ‌. ಮುಂದಿನ ಚುನಾವಣೆಯಲ್ಲಿ ಅನುಕೂಲ ಆಗಲು ಈಗನಿಂದಲೇ ತಯಾರಿ ನಡೆಸಲಾಗಿದೆ. ಎರಡು ಕ್ಷೇತ್ರದಲ್ಲಿ ಓಡಾಟ ನಡೆಸಿ ಪಕ್ಷ ಸಂಘಟನೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಡಿಕೆಶಿ ಭೇಟಿ ವಿಚಾರಕ್ಕೆ ಉತ್ತರಿಸಿದ ಅವರು, ಯಾರು ಎನ್ ಸಂದೇಶ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟ ಉತ್ತರ ಕೊಡಬೇಕು ನನ್ನ ಬಳಿ ಉತ್ತರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೇಯರ್ ಆಗಲು ಒಂದು ವರ್ಷ ಬೇಕೆ ಬೇಕು ಎಂದು ಸತೀಶ ಜಾರಕಿಹೊಳಿ, ಬೆಳಗಾವಿಯಲ್ಲಿ ವ್ಯವಸ್ಥೆ ಹಾಗೀಗೆ ಏನ್ ಮಾಡೊಕೆ ಆಗಲ್ಲ. ಮೇಯರ್ ಆಗಲು ಒಂದು ವರ್ಷ ಬೇಕು.
ಅಧಿಕಾರ ಯಾರು ಮಾಡಬೇಕು ಅವರಿಗೆ ಸಿಗುತ್ತಿಲ್ಲ.
ಬೂಡಾದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಪಾಲಿಕೆಯಲ್ಲಿ ಹಿಂದೆ ಕೆಲವೇ ಜನ ಅಧಿಕಾರ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಆಪ್ತನ ಮೇಲೆ ಐಟಿ ದಾಳಿ ವಿಚಾರ‌ಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪ ಈಗ ವಿರೋಧ ಪಕ್ಷದಲ್ಲಿ ಇದ್ದಂತೆ.
ಯಡಿಯೂರಪ್ಪ ಇಳಿಸಿದ ಮೇಲೆ ವಿರೋಧ ಪಕ್ಷದಂತೆ ಇದ್ದಂತೆ.ಬಿಜೆಪಿ ವಿರೋಧ ಪಕ್ಷದಲ್ಲಿ ಯಡಿಯೂರಪ್ಪ ಇದ್ದಾರೆ‌. ಬಿಜೆಪಿಯಲ್ಲಿ ಆತಂರಿಕ ಸಮಸ್ಯೆಗಳು ಇವೆ. ಕಾಲ ಈ ಬಗ್ಗೆ ಎಲ್ಲವೂ ಹೇಳಲಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!