Select Page

ಬುಡಾ ಸಭೆಗೆ ಬಿಜೆಪಿ ಇಬ್ಬರು ಶಾಸಕರು ಗೈರು : ಸಭೆ ಮುಂದಕ್ಕೆ

ಬುಡಾ ಸಭೆಗೆ ಬಿಜೆಪಿ ಇಬ್ಬರು ಶಾಸಕರು ಗೈರು : ಸಭೆ ಮುಂದಕ್ಕೆ

ಬೆಳಗಾವಿ : ನಗರದ ಅಭಿವೃದ್ಧಿಗೆ ಸಾಥ್ ಕೊಡಬೇಕಿದ್ದ ಬೆಳಗಾವಿ ಬಿಜೆಪಿ ಶಾಸಕರು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಕರೆಯಲಾರದ ಸಭೆಗೆ ಗೈರಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಹೊಸ ಬಡಾವಣೆಗೆ ಅನುಮೋದನೆ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಕರೆಯಲಾದ ಸಭೆಯಲ್ಲಿ ಕೋರಂ ಕೊರತೆಯಿಂದ ಮತ್ತೇ ಮುಂದೂಡಲಾಯಿತು.
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಿದ್ದ ಬಿಜೆಪಿ ನಾಯಕರುಗಳು ಕಳೆದ 16 ವರ್ಷಗಳಿಂದ ಬೆಳಗಾವಿಯಲ್ಲಿ ಹೊಸ ಬಡಾವಣೆಯಾಗಿಲ್ಲ. ಹೊಸ ಬಡಾವಣೆಗಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಅದು ಎಲ್ಲಿ ಹೋಯಿತು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಬುಡಾದ ಸಭೆಯಲ್ಲಿ ಪ್ರಾಧಿಕಾರದಿಂದ ಡಿಸೆಂಬರ್ 2020ರಿಂದ ಸೆಪ್ಟೆಂಬರ್2021ರ ವರೆಗಿನ ಆದಾಯ ಮತ್ತು ವೆಚ್ಚವನ್ನು ಪರಿಶೀಲನೆ ನಡೆಸಿ ಮಂಜೂರಾತಿಗೆ ಅನುಮೋದನೆ ನೀಡಬೇಕಿತ್ತು.

ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಯೋಜನೆ ಸಂಖ್ಯೆ ( ಸ್ಕೀಮ್) 61 ರಲ್ಲಿ ಭೂಮಿಯನ್ನು ಸಮಮಟ್ಟು ಮಾಡಿ ನಿವೇಶನಗಳನ್ನು ಗುರುತಿಸಿ, ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ಅರ್ಪಾಮೆಂಟ್ ನಿರ್ಮಾಣಕ್ಕೆ ಅನುಮೋದನೆ ನೀಡಬೇಕಿತ್ತು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಟ್ಟರೆ ಸಭೆಗೆ ಯಾರೂ ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.

ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಬುಡಾ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಸ್ಥಳೀಯ ಶಾಸಕರು, ಕೆಲ‌ ಅಧಿಕಾರಿಗಳ ಗೈರಾಗಿರುವುದರಿಂದ ಮತ್ತೊಮ್ಮೆ ಶೀಘ್ರದಲ್ಲೇ ಸಭೆ ಕರೆಯಲಾಗುವುದು ಎಂದು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದರು.

ಸೋಮವಾರ ನಗರದ ಬುಡಾ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ 17 ವರ್ಷದಿಂದ ಬುಡಾ ಹೊಸಬಡಾವಣೆಯಾಗಿಲ್ಲ.‌ ಕೆಲ ಜನ ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗಾಗಲೇ 160 ಎಕರೆಯಲ್ಲಿ ಬಡಾವಣೆ ನಿರ್ಮಾಣ ಮಾಡಲು ಸರಕಾರ ಅನುಮೋದನೆ ನೀಡಿದೆ.

ಕಳೆದ ಎರಡೂ ಸಭೆಯಲ್ಲಿ ಶಾಸಕರು, ಸದಸ್ಯರು ಗೈರಾಗಿರುವುದರಿಂದ ಸಭೆ ಮುಂದೂಡಲಾಗಿತ್ತು. ಆದರೆ ಅವರನ್ನು ಕೇಳಿಯೇ ಇಂದು ಸಭೆ ಕರೆಯಲಾಗಿತ್ತು. ಯಾವ ಕಾರಣಕ್ಕೆ ಹಾಜರಾಗಲಿಲ್ಲ ಎಂಬುದು ತಿಳಿಯುತ್ತಿಲ್ಲ. ರಾಜ್ಯದಲ್ಲಿ ನಮ್ಮ ಸರಕಾರ ಇರುವುದರಿಂದ ಜನರಿಗೆ ಬೇರೆ ಸಂದೇಶ ರವಾನೆಯಾಗುವುದು ಬೇಡ.ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಮುಂಬರುವ ದಿನಗಳಲ್ಲಿ ಸಭೆ ಕರೆಯಲಾಗುವುದು ಎಂದರು.


Advertisement

Leave a reply

Your email address will not be published. Required fields are marked *

error: Content is protected !!